ಮೋದಿ ಮೆಚ್ಚಿದ್ದ ಕವಿಗೆ 26ಕ್ಕೆ ದೆಹಲಿ ಗಣರಾಜ್ಯೋತ್ಸವಕ್ಕೆ ಆಹ್ವಾನಕೊಳ್ಳೇಗಾಲ ಪ್ರಧಾನಿ ಮೋದಿ ಮೆಚ್ಚಿದ್ದ ಜೋಗುಳ ಪದ ರಚಿಸಿದ್ದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಕವಿ ಮಂಜುನಾಥ್ ಅವರಿಗೆ ಜ.26 ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವಂತೆ ಕೇಂದ್ರ ಸರ್ಕಾರ ಆಹ್ವಾನ ನೀಡಿದೆ.ಮಂಜುನಾಥ್ ಅವರು ವೖತ್ತಿಯಲ್ಲಿ ಎಲ್ಐಸಿ ವಿಮಾ ಪಾಲಿಸಿದಾರರಾಗಿ ಪ್ರವೃತ್ತಿಯಲ್ಲಿ ಕವಿಯಾಗಿ ಗುರುತಿಸಿಕೊಂಡಿದ್ದವರು. ಅವರು ಕೋವಿಡ್ ವೇಳೆ ಮಲಗು ಕಂದ ಮಲಗು ಕೂಸೆ, ಮಲಗು ನನ್ನ ಜಾಣ ಮರಿಯೇ.. ಎಂಬ ಸಾಲಿನಿಂದ ಕೂಡಿದ ಜೋಗುಳ ಪದ ರಚಿಸಿದ್ದರು. ಕೇಂದ್ರ ಸರ್ಕಾರ 75ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆ ಆನ್ ಲೈನ್ ರಂಗೋಲಿ, ದೇಶಭಕ್ತಿ ಗೀತೆ, ಲಾಲಿಹಾಡು ಸ್ಪರ್ಧೆಗಳನ್ನು ಯೋಜಿಸಲಾಗಿತ್ತು. ಇದನ್ನು ಮನಗಂಡ ಮಂಜುನಾಥ್ ಅವರು ತಮ್ಮ ಪುತ್ರನ ಒತ್ತಾಸೆಗೆ ಮಣಿದು ಜೋಗುಳದ ಹಾಡು ರಚಿಸಿ ಕಳುಹಿಸಿದ್ದರು.