ಶ್ರದ್ಧಾ ಭಕ್ತಿಯೊಂದಿಗೆ ತ್ರಿವಿಧ ದಾಸೋಹಿಯ ಪುಣ್ಯಸ್ಮರಣೆ ಚಾಮರಾಜನಗರತ್ರಿವಿಧ ದಾಸೋಹಿ, ದೇಶ ಕಂಡ ಆಧುನಿಕ ಸಂತ, ಸಿದ್ಧಗಂಗೆಯ ಪುಣ್ಯ ಪುರುಷ ಡಾ. ಶಿವಕುಮಾರ ಸ್ವಾಮೀಜಿಯವರ ೫ನೇ ಪುಣ್ಯ ಸ್ಮರಣೆಯನ್ನು ದಾಸೋಹ ದಿನವನ್ನಾಗಿ ಜಿಲ್ಲಾ ಕೇಂದ್ರದ ವಿವಿಧೆಡೆ ಶ್ರದ್ಧಾ ಭಕ್ತಿಯೊಂದಿಗೆ ಆಚರಿಸಿ, ಆನ್ನದಾಸೋಹ ಮಾಡಲಾಯಿತು. ನಗರದ ಜಿಲ್ಲಾಡಳಿತ ಭವನದ ಬಳಿ ಇರುವ, ಅಧ್ಯಕ್ಷ ಹೋಟೆಲ್ ಮುಂಭಾಗ ಸೇರಿದಂತೆ ವಿವಿಧೆಡೆ ಡಾ. ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಅನ್ನದಾಸೋಹ ಮಾಡಲಾಯಿತು. ಗೌಡಹಳ್ಳಿ ಮಠದ ಮರಿ ತೋಂಟದಾರ್ಯ ಸ್ವಾಮೀಜಿ ಮಾತನಾಡಿ ಈ ನಾಡು ಕಂಡ ಪುಣ್ಯ ಪುರುಷರಲ್ಲಿ ಡಾ. ಶಿವಕುಮಾರ ಸ್ವಾಮೀಜಿ ಒಬ್ಬರು, ಸಹಸ್ರಾರು ವಿದ್ಯಾರ್ಥಿಗಳಿಗೆ ಅನ್ನ, ವಿದ್ಯೆ ಆಶ್ರಯ ನೀಡಿ ಅವರ ಬದುಕನ್ನು ಬೆಳಗಿದ ಪುಣ್ಯಾತ್ಮರು ಎಂದರು.