ಜಿಲ್ಲೆಯಾದ್ಯಂತ ಸಂಭ್ರಮದಿಂದ ಸಂಕ್ರಾಂತಿ ಆಚರಣೆಚಾಮರಾಜನಗರಸೂರ್ಯಾರಾಧನೆಯ ಹಬ್ಬವಾದ ಮಕರ ಸಂಕ್ರಾಂತಿಯನ್ನು ಜಿಲ್ಲೆಯಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಸುಗ್ಗಿಯ ಕಾಲದ ಹಬ್ಬವಾದ ಈ ಹಬ್ಬದಲ್ಲಿ ಅಕ್ಕಿ, ತುಪ್ಪ, ಹಾಲು, ಸಕ್ಕರೆ ಅಥವಾ ಬೆಲ್ಲಗಳಿಂದ ಮಾಡಿದ ಸಿಹಿ ಮಾಡಿ ಇದನ್ನು ಸೂರ್ಯದೇವನಿಗೆ ನೈವೇದ್ಯ ಮಾಡಿದರು. ಎಳ್ಳು, ಬೆಲ್ಲ ಸಕ್ಕರೆ ಅಚ್ಚುಗಳನ್ನು ನೆರೆಯವರಿಗೆ ಬಂಧು ಮಿತ್ರರಿಗೆ ಹಂಚಿ ಸಂಭ್ರಮಿಸಿದರು. ಮನೆ ಮನೆಗಳಲ್ಲಿ ಹೆಣ್ಣು ಮಕ್ಕಳನ್ನು ಕುಳ್ಳಿರಿಸಿ, ಆರತಿ ಮಾಡಿ, ಎಳ್ಳು ಬೆಲ್ಲ ಬೀರಲಾಯಿತು. ಮನೆಗಳ ಮುಂದೆ ಮಾವಿನಸೊಪ್ಪು, ಅನ್ನಸೊಪ್ಪು ಕಟ್ಟಲಾಗಿತ್ತು.