ಕುಡಿವ ನೀರಿನ ಪೋಲು ತಡೆಯಲು ಮುಂದಾದ ಪುರಸಭೆಪುರಸಭೆ ನಿರ್ಲಕ್ಷ್ಯ, ಕುಡಿವ ನೀರು ಪೋಲು ಎಂಬ ಕನ್ನಡಪ್ರಭ ವರದಿಗೆ ಎಚ್ಚೆತ್ತ ಪುರಸಭೆ ಪೋಲಾಗುತ್ತಿದ್ದ ಕುಡಿವ ನೀರಿನ ಪೋಲು ತಡೆಯಲು ಮುಂದಾಗಿದೆ. ಜ.೧೧ ರಂದು ಕನ್ನಡಪ್ರಭ ಪತ್ರಿಕೆಯಲ್ಲಿ ತಾಲೂಕಿನ ಮಳವಳ್ಳಿ ಗೇಟ್ ಬಳಿ ಕಬಿನಿ ನೀರಿನ ಪೈಪ್ ಒಡೆದು ಆರು ದಿನದಿಂದ ಕಬಿನಿ ಕುಡಿವ ನೀರು ಪೋಲಾಗುತ್ತಿದೆ ಅಲ್ಲದೆ ಪೋಲಾದ ನೀರು ಈರುಳ್ಳಿ ಜಮೀನಿನ ಬಳಿ ನಿಂತು ಈರುಳ್ಳಿ ಬೆಳೆ ಹಾಳಾಗುತ್ತದೆ ಎಂದು ಸುದ್ದಿ ಪ್ರಕಟಗೊಂಡಿತ್ತು.