ವ್ಯವಸಾಯಕ್ಕೆ ಅನುವು ಮಾಡಿಕೊಡುವಂತೆ ಸಾಗುವಳಿದಾರರ ಪ್ರತಿಭಟನೆಚಂದಕವಾಡಿ ಹೋಬಳಿ, ಮೌಜೆ ಹೊಂಗಲವಾಡಿ, ಪುಣಜನೂರು ಸ್ಟೇಟ್ ಫಾರೆಸ್ಟ್ ಸ. ನಂ.೧, ೩ ಮತ್ತು ೫ರ ಜಮೀನುಗಳಲ್ಲಿ ಚಾಮರಾಜನಗರ ಟೌನ್‌ನ ೧೩ ಮತ್ತು ೧೪ ವಾರ್ಡ್‌ನ ಪ.ಜಾತಿಗೆ ಸೇರಿದ ಸಾಗುವಳಿದಾರರು, ಅರಣ್ಯ ಇಲಾಖೆಯವರು ನಮಗೆ ವ್ಯವಸಾಯ ಮಾಡಲು ಅವಕಾಶ ನೀಡದೆ ತೊಂದರೆ ಕೊಡುತ್ತಿದ್ದಾರೆ ಎಂದು ಅರೋಪಿಸಿ ನಗರದಲ್ಲಿ ಪ್ರತಿಭಟನೆ ನಡೆಸಿ ಸ್ಥಳಕ್ಕಾಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್‌ಗೆ ಮನವಿ ಸಲ್ಲಿಸಿದರು.