ಕೋರ್ಟ್ ರಸ್ತೆ ಅಭಿವೃದ್ಧಿಗೆ ಇನ್ನೆಷ್ಟು ವರ್ಷ ಕಾಯಬೇಕು? ಗುಂಡ್ಲುಪೇಟೆಪಟ್ಟಣದ ಜನನಿಬಿಡ ರಸ್ತೆ (ಪಟ್ಟಣದ ಮಡಹಳ್ಳಿ ವೃತ್ತದಿಂದ ಜೆಎಸ್‌ಎಸ್ ಅನುಭವ ಮಂಟಪ) ತನಕ ಗುಂಡಿಗಳ ಕಾರು ಬಾರು ಮತ್ತು ದೂಳಿನ ಉಚಿತ ಸಿಂಚನ ಜನರಿಗೆ ಆಗುತ್ತಿದೆ. ಪಟ್ಟಣದ ಮಡಹಳ್ಳಿ ವೃತ್ತದಿಂದ ಜೆಎಸ್‌ಎಸ್ ಅನುಭವ ಮಂಟಪದ ತನಕ ಬಾಲಕಿಯರ ಪ್ರೌಢಶಾಲೆ, ಅರಣ್ಯ ಕಚೇರಿ, ಪೊಲೀಸ್ ಠಾಣೆ, ನ್ಯಾಯಾಲಯ, ಜೆಎಸ್‌ಎಸ್ ಕಲಾ ಮತ್ತು ವಾಣಿಜ್ಯ ಕಾಲೇಜು, ಜೆಎಸ್‌ಎಸ್ ಅನುಭವ ಮಂಟಪ, ಸಿಎಂಎಸ್ ಕಲಾಮಂದಿರ ಹಾಗೂ ಪಟ್ಟಣದ ಹೊಸ ಬಡಾವಣೆಗೆ ತೆರಳುವ ಪ್ರಮುಖ ರಸ್ತೆಯ ಸ್ಥಿತಿ ಕಂಡು ಸವಾರರು ಹಾಗೂ ಜನರು ತಾಲೂಕು ಆಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.