ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಸಾರಿಗೆ ಬಸ್ ಪ್ರಯಾಣ ದರ ಇಳಿಕೆಕನ್ನಡಪ್ರಭ ಪತ್ರಿಕೆಯ ವರದಿಗೆ ಎಚ್ಚೆತ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಾಡಿನ ಪ್ರಸಿದ್ಧ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹೊಸ ವರ್ಷದ ನೆಪದಲ್ಲಿ ಸಾರಿಗೆ ಬಸ್ ದರ ದಿಡೀರ್ ಏರಿಸಿದ್ದ ದರವನ್ನು ಇಳಿಕೆ ಮಾಡಿದ್ದಾರೆ. ಜ.೧೩ ರ ಕನ್ನಡಪ್ರಭ ಪತ್ರಿಕೆಯಲ್ಲಿ ಗೋಪಾಲಸ್ವಾಮಿ ಭಕ್ತರಿಗೆ ಬಸ್ ದರ ಏರಿಕೆ ಬಿಸಿ, ೨೦೨೩ ರ ತನಕ ೬೦ ರು ಇತ್ತು. ಹೊಸ ವರ್ಷದಿಂದ ಬಸ್ ದರ ೭೦ ರು.ಗೋಪಾಲಸ್ವಾಮಿ ಬೆಟ್ಟದ ದೂರ ೬ ಕಿಮಿ ಎಂದು ವರದಿ ಪ್ರಕಟಿಸಿ ಕೆಎಸ್‌ಆರ್‌ಟಿಸಿ ಗಮನ ಸೆಳೆದಿತ್ತು.