ಹೊರಗಿನಿಂದ ಬಂದವರು ಕನ್ನಡ ಭಾಷೆಗೆ ಗೌರವ ಕೊಡಬೇಕು: ಅಶೋಕ್ಬದುಕು ರೂಪಿಸಲು ಭಾಷಾವಾರು ಪ್ರಾಂತ್ಯಗಳನ್ನು ಮಾಡಲಾಗಿದೆ. ನಮ್ಮ ರಾಜ್ಯಕ್ಕೆ ಹೊರಗಿನಿಂದ ಯಾರೇ ಬಂದರೂ ಕನ್ನಡ ಭಾಷೆ, ಸಂಸ್ಕೃತಿಗೆ ಗೌರವ ಕೊಟ್ಟು ಬದುಕುವಂತಾಗಬೇಕು. ಆದರೆ ಈಗ ವಿವಿಧ ಹುದ್ದೆ ಅಲಂಕರಿಸಬೇಕೆಂದರೆ ಆಂಗ್ಲ ಭಾಷೆ ತಿಳಿದವರಿಗೆ ಮೊದಲ ಆಧ್ಯತೆ ನೀಡಲಾಗುತ್ತಿದೆ. ಇದನ್ನು ಗಮನಿಸಿದರೆ ನಾವು ನಿಜವಾಗಿಯೂ ಗೋಕಾಕ್ ಚಳುವಳಿ ಮಾಡಿದ್ದೇವಾ ಎಂಬ ಪ್ರಶ್ನೆ ನಮ್ಮಲ್ಲೇ ಮೂಡುತ್ತದೆ ಎಂದು ಚಲನಚಿತ್ರ ನಟ ಅಶೋಕ್ ಹೇಳಿದರು.