ಭದ್ರಾ ಮೇಲ್ದಂಡೆಗಾಗಿ ನಾಯಕನಹಟ್ಟಿ ಸಂಪೂರ್ಣ ಬಂದ್ಭದ್ರಾ ಮೇಲ್ದಂಡೆ ಕಾಮಗಾರಿ ಶೀಘ್ರ ಕಾರ್ಯಾನುಷ್ಠಾನಕ್ಕೆ ಆಗ್ರಹಿಸಿ ಶಾಲೆ-ಕಾಲೇಜು, ಆಟೋ, ಬಸ್ಸು ಸಂಚಾರ ಸೇರಿ ದಿನವಿಡೀ ವಹಿವಾಟು ಸ್ತಬ್ಧವಾಗಿತ್ತು. ಮೋದಿ, ದೇವೇಗೌಡ, ಸಿದ್ದರಾಮಯ್ಯ ಹೆಸರಲ್ಲಿ ತಿಪ್ಪೇರುದ್ರಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಈ ವೇಳೆ ಜಲಸಂಪನ್ಮೂಲ ಇಲಾಖೆ ಅನುದಾನದಲ್ಲಿ ಹತ್ತು ಸಾವಿರ ಕೋಟಿ ರು ಕಾಯ್ದಿರಿಸಲು ಆಗ್ರಹ ಮಾಡಲಾಯಿತು.