ಟಿಕೆಟ್ ಮಿಸ್: ಬಿಜೆಪಿ ವಿರುದ್ಧ ದಂಗೆ ಎದ್ದ ಅಪ್ಪ, ಮಗಚಿತ್ರದುರ್ಗ ಲೋಕಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಬಾಗಲಕೋಟೆಯ ಗೋವಿಂದಕಾರಜೋಳ ಅವರಿಗೆ ನೀಡುತ್ತಿದ್ದಂತೆ ಕೋಟೆ ನಾಡಲ್ಲಿ ತೀವ್ರತೆರನಾದ ಅಸಮಧಾನದ ಹೊಗೆ ಎದ್ದಿದೆ. ಟಿಕೆಟ್ ಆಕಾಂಕ್ಷಿ ರಘುಚಂದನ್ ಹಾಗೂ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಗುರುವಾರ ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿ ಯಡಿಯೂರಪ್ಪ ವಿರುದ್ದ ಹರಿಹಾಯ್ದರು. ಟಿಕೆಟ್ ತಪ್ಪಲು ಅವರೇ ಕಾರಣವೆಂದು ದೂರಿದರು.