ಲಿಂಗ ಸಮಾನತೆ ಅರಿವಿನಿಂದ ಪರಿವರ್ತನೆಯ ಕತೆ ಹೇಳಿದ ಮಕ್ಕಳು..ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ಮಹಿಳಾ ಸಬಲೀಕರಣದಲ್ಲಿ ಶಿಕ್ಷಣದ ಪಾತ್ರ ಅತ್ಯಂತ ಮಹತ್ವದ್ದು. ಮಹಿಳೆಯೊಬ್ಬರು ಶಿಕ್ಷಣ ಪಡೆದಾಗ ಆಕೆಯ ಕುಟುಂಬ ಮತ್ತು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಶಕ್ತಿ ಬರುತ್ತದೆ. ಇಂತಹ ಜೆಂಡರ್ ಚಾಂಪಿಯನ್ಸ್ ಕಾರ್ಯಕ್ರಮವು ದೀರ್ಘಾವಧಿಯಲ್ಲಿ ಉತ್ತಮ ಸಮಾಜ ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಹೇಳಿದರು.