ರಾಜ್ಯಾದ್ಯಂತ ಹೈನುಗಾರರ ಪ್ರೋತ್ಸಾಹಧನ ಬಾಕಿ: ಒಪ್ಪಿದ ಪಶುಸಂಗೋಪನೆ ಸಚಿವಹೈನುಗಾರರಲ್ಲಿ ಸಾಮಾನ್ಯ ವರ್ಗದವರಿಗೆ 613.58 ಕೋಟಿ ರು., ಪರಿಶಿಷ್ಟ ಜಾತಿಯವರಿಗೆ 18.29 ಕೋಟಿ ರು. ಹಾಗೂ ಪರಿಶಿಷ್ಟ ಪಂಗಡದವರಿಗೆ 24.20 ಕೋಟಿ ರು.ಗಳು ಪಾವತಿಸಲು ಬಾಕಿ ಇದೆ. ಬಾಕಿ ಇರುವ ಹಾಲಿನ ಪ್ರೋತ್ಸಾಹಧನವನ್ನು ಹೈನುಗಾರರಿಗೆ ಪಾವತಿಸಲು ಹೆಚ್ಚುವರಿ ಅನುದಾನ ಕೋರಿ ಸಲ್ಲಿಸಿರುವ ಪ್ರಸ್ತಾವನೆಯು ಪರಿಶೀಲನೆಯಲ್ಲಿದೆ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ತಿಳಿಸಿದ್ದಾರೆ.