ಕುಡಿತದಿಂದ ಆಯುಷ್ಯ ಇಳಿಕೆ, ಘನತೆಗೆ ಕುಂದು: ಡಾ. ವೀರೇಂದ್ರ ಹೆಗ್ಗಡೆವ್ಯಸನ ಎಂಬುದು ಪ್ರಾಣಿಯು ಬೋನಿಗೆ ಬಿದ್ದಂತೆ, ಬೋನಿನೊಳಗೆ ಬಿದ್ದರೆ ಹೊರ ಬರಲು ಕಷ್ಟ. ಕುಡಿತದ ವ್ಯಸನದಿಂದ ಮನುಷ್ಯನ ಆಯುಷ್ಯ ಕಡಿಮೆ ಆಗುವುದರೊಂದಿಗೆ ಘನತೆ, ಗೌರವಕ್ಕೆ ಕುಂದು ಬರುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.ಅವರು ಧರ್ಮಸ್ಥಳದಲ್ಲಿ 234ನೇ ವಿಶೇಷ ಮದ್ಯವರ್ಜನ ಶಿಬಿರದ 66 ಮಂದಿ ಶಿಬಿರಾರ್ಥಿಗಳನ್ನು ಆಶೀರ್ವದಿಸಿ ಅವರು ಮಾತನಾಡಿದರು.