ಕಾರು ಕಂದಕಕ್ಕೆ ಉರುಳಿ ಮೂವರು ಸ್ಥಳದಲ್ಲೇ ಸಾವುಮುಂಜಾನೆ ಸುಮಾರು ೪.೧೫ರ ವೇಳೆಗೆ ಕಾರು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದು ಕಾರಿನಲ್ಲಿದ್ದ ಮೂವರೂ ಮೃತಪಟ್ಟಿದ್ದಾರೆ. ಆದರೆ ಬೆಳಗ್ಗಿನ ಬಳಿಕವಷ್ಟೇ ಘಟನೆ ಬೆಳಕಿಗೆ ಬಂದಿದೆ. ಕಂದಕಕ್ಕೆ ಉರುಳಿದ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಮೃತದೇಹಗಳು ಕಾರಿನ ಹೊರಭಾಗಕ್ಕೆ ಎಸೆಯಲ್ಪಟ್ಟಿದ್ದವು.