ಮೂಡುಬಿದಿರೆ: ಮುಂದುವರಿದ ಬಿರುಗಾಳಿ ಅಬ್ಬರಮೂಡುಬಿದಿರೆ ಪರಿಸರದಲ್ಲಿ ಸೋಮವಾರವೂ ಬಿರುಗಾಳಿ ಸಹಿತ ಆಗಾಗ ಜೋರಾಗಿ ಮಳೆ ಸುರಿದು ವ್ಯಾಪಕ ಹಾನಿಯುಂಟಾಗಿದೆ. ಅಲಂಗಾರು, ಚಂದ್ರಾಪುರ, ಪಳಕಳ, ಆಶ್ರಯ ಕಾಲನಿ ಪರಿಸರದಲ್ಲಿ ಸೋಮವಾರ ಸಂಜೆ ಗಾಳಿಮಳೆಗೆ ೬ಮನೆಗಳು ಹಾನಿಗೀಡಾಗಿವೆ. ೧೫ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರುಳಿ ವಿದ್ಯುತ್ ಪೂರೈಕೆ ಅಸ್ತವ್ಯಸ್ತ ವಾಗಿದೆ.