• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • dakshina-kannada

dakshina-kannada

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಪರಿಸರ ಜಾಗೃತಿಗೆ ಯುವಕನ ಸೈಕಲ್ ಜಾಥಾ
ಉತ್ತರ ಪ್ರದೇಶ ರಾಜ್ಯದ ಇಟವಾ ಎಂಬಲ್ಲಿನ ನಿವಾಸಿ ರಾಬಿನ್ ಸಿಂಗ್ ಪ್ಲಾಸ್ಟಿಕ್‌ ಮುಕ್ತ ಪರಿಸರ ಜಾಗೃತಿಗಾಗಿ ಅಭಿಯಾನ ನಡೆಸುತ್ತಿರುವ ಯುವಕ. ೨೦೨೨ರ ಅಕ್ಟೋಬರ್‌ನಲ್ಲಿ ತಮಿಳುನಾಡಿನ ಕನ್ಯಾಕುಮಾರಿಯಿಂದ ಸೈಕಲ್ ಮೂಲಕ ದೇಶ ಪರ್ಯಟನೆ ಆರಂಭಿಸಿರುವ ರಾಬಿನ್ ಸಿಂಗ್ ಈಗಾಗಲೇ ಉತ್ತರ ಮತ್ತು ದಕ್ಷಿಣ ಭಾರತದ ಬಹುತೇಕ ರಾಜ್ಯಗಳನ್ನು ಕ್ರಮಿಸಿದ್ದು, ಈಗ ದಕ್ಷಿಣಕನ್ನಡ ಜಿಲ್ಲೆಗೆ ಆಗಮಿಸಿದ್ದಾರೆ
ಮೂಡುಬಿದಿರೆ ಪಾರ್ಕಿಂಗ್‌ ಅವ್ಯವಸ್ಥೆ: ಅಧಿಕಾರಿಗಳ ಸಭೆ
ಮೂಡುಬಿದಿರೆಯಲ್ಲಿ ಪಾರ್ಕಿಂಗ್ ಅವ್ಯವಸ್ಥೆ, ಖಾಸಗಿ ಬಸ್‌ಗಳಿಂದಾಗುವ ಸಮಸ್ಯೆಗಳ ಕುರಿತು ಪುರಸಭೆ, ಪೋಲಿಸ್, ಬಸ್ ಮಾಲಕರು ಹಾಗೂ ಬಸ್‌ ನಿಲ್ದಾಣದ ವಾಣಿಜ್ಯ ಸಂಕೀರ್ಣಗಳ ಮಾಲಕರ ಜೊತೆ ಸಮಾಜ ಮಂದಿರದಲ್ಲಿ ಮಂಗಳವಾರ ನಡೆದ ಸಮಾಲೋಚನಾ ಸಭೆ ನಡೆಯಿತು. ಬಸ್‌ಗಳು ಸಮಯ ಪಾಲನೆ ಮಾಡಬೇಕು ಹಾಗೂ ಎಕ್ಸ್‌ಪ್ರೆಸ್ ಬಸ್‌ಗಳ ವೇಗಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬಂತು.
ಹಸಿತ್ಯಾಜ್ಯ ಸಿಎನ್‌ಜಿ ಮಾರುಕಟ್ಟೆಗೆ ಶೀಘ್ರ ಅನುಮತಿ: ರಾಜೇಶ್‌ ನಾಯ್ಕ್‌
ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ವಿಲೇವಾರಿಗೆ ತಲೆನೋವಾಗಿದ್ದ ಹಸಿ ತ್ಯಾಜ್ಯವನ್ನು ಉಪಯೋಗಿಸಿಕೊಂಡು ಸಿಎನ್‌ಜಿ (ಕಂಪ್ರೆಸ್ಡ್‌ ನ್ಯಾಚುರಲ್ ಗ್ಯಾಸ್‌) ಉತ್ಪಾದಿಸುವ ರಾಜ್ಯದ ಪ್ರಥಮ ಘಟಕವನ್ನು ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ್‌ ಅವರು ತಮ್ಮದೇ ಒಡ್ಡೂರು ಫಾರ್ಮ್ಸ್‌ನಲ್ಲಿ ಸ್ಥಾಪಿಸಿದ್ದು, ಇಲ್ಲಿ ಉತ್ಪಾದನೆಯಾಗುವ ಸಿಎನ್‌ಜಿಯನ್ನು ಮಾರುಕಟ್ಟೆಗೆ ಒದಗಿಸಲು ಭಾರತ ಸರ್ಕಾರದ ಪೆಟ್ರೋಲಿಯಂ ಸಚಿವಾಲಯದಿಂದ ಶೀಘ್ರ ಅನುಮತಿ ದೊರೆಯಲಿದೆ ಎಂದು ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ್‌ ಹೇಳಿದರು. ಅವರು ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ವಿಶೇಷ ಗೌರವ ಅತಿಥಿಯಾಗಿ ಸಂವಾದ ನಡೆಸಿದರು.
ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ರೋಗಿಗಳ ಪರದಾಟ: ಡಿಎಚ್‌ಒ ವಿರುದ್ಧ ಮಾಜಿ ಶಾಸಕ ಗರಂ
ಬೆಳ್ತಂಗಡಿ ತಾಲೂಕು ತಾಲೂಕು ಆಸ್ಪತ್ರೆಯ ಡಯಾಲಿಸಿಸ್‌ ರೋಗಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ದ.ಕ. ಜಿಲ್ಲಾ ಆರೋಗ್ಯಾಧಿಕಾರಿಗಳು ಆಸ್ಪತ್ರೆಗೆ ಬೇಕಾಗುವ ವ್ಯವಸ್ಥೆಗಳನ್ನು ಕಲ್ಪಿಸಲು ಗಮನಹರಿಸುತ್ತಿಲ್ಲ, ಯಾರಿಗೂ ಮಾಹಿತಿ ನೀಡದೆ ಮಧ್ಯಾಹ್ನದ ವೇಳೆಯೇ ಬಂದು ಹೋಗಿದ್ದಾರೆ ಎಂದು ಮಾಜಿ ಶಾಸಕ ವಸಂತ ಬಂಗೇರ ಆರೋಪಿಸಿದರು.
ಜನವರಿಯಲ್ಲಿ ಸ್ವನಿಧಿ ಬೃಹತ್‌ ಸಮಾವೇಶ: ನಳಿನ್‌ ಕುಮಾರ್‌
ಪ್ರಧಾನಿ ನರೇಂದ್ರ ಮೋದಿ ಅವರ ಜನೋಪಯೋಗಿ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಪ್ರಧಾನಮಂತ್ರಿ ಪರಿಕಲ್ಪನೆಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಪಿಎಂ ಸ್ವನಿಧಿ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ 12.61 ಕೋಟಿ ರು. ಬ್ಯಾಂಕ್‌ ಸಾಲ ವಿತರಿಸಲಾಗಿದೆ. ಒಟ್ಟು 8851 ಫಲಾನುಭವಿಗಳು ಯೋಜನೆಯ ಲಾಭ ಪಡೆದಿದ್ದಾರೆ ಎಂದು ದ.ಕ. ಸಂಸದ ನಳಿನ್‌ ಕುಮಾರ್ ತಿಳಿಸಿದರು.
ನೀರಿಗೆ ಸಮಸ್ಯೆಯಾಗದಂತೆ ಯೋಜನೆ ರೂಪಿಸಿ: ಸಚಿವ ರಹೀಂ ಖಾನ್
ನೀರಿನ ಮೂಲದಿಂದ ಮನೆಗೆ ತಲುಪುವ ತನಕ ನೀರಿನ ಸಂಗ್ರಹ ಮತ್ತು ವಿತರಣೆಯಲ್ಲಿ ಯಾವುದೇ ಸಮಸ್ಯೆ ಉಂಟಾಗದಂತೆ ಗಮನ ಹರಿಸಬೇಕು. ಜನರು ಕುಡಿಯುವ ನೀರಿಗೆ ಪರದಾಡುವಂತಹ ಸನ್ನಿವೇಶ ಯಾವುದೇ ಕಾರಣಕ್ಕೂ ಉದ್ಭವ ಆಗಬಾರದು. ಕೊನೆಯ ಕ್ಷಣದಲ್ಲಿ ಕಾರ್ಯಪ್ರವೃತ್ತರಾಗುವ ಬದಲು ಮುಂದಾಲೋಚನೆಯಿಂದ ಯೋಜನೆಗಳನ್ನು ರೂಪಿಸಿದರೆ ಬೇಸಗೆಯಲ್ಲಿ ನೀರಿನ ಕೊರತೆ ಎದುರಾಗದು ಎಂದು ಸಚಿವ ರಹೀಂ ಖಾನ್ ತಿಳಿಸಿದರು.
ಕಸ್ತೂರ್ಬಾ ಮೆಡಿಕಲ್ಲ್‌ ಕಾಲೇಜಿನಲ್ಲಿ 3ಡಿ ಡಿಸೈನಿಂಗ್ ಮತ್ತು ಪ್ರಿಂಟಿಂಗ್ ಲ್ಯಾಬ್
ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಡೀನ್ ಡಾ.ಬಿ. ಉನ್ನಿಕೃಷ್ಣನ್ ಮಾತನಾಡಿ, ಪೂರ್ವ ಶಸ್ತ್ರಚಿಕಿತ್ಸಾ ಯೋಜನೆ, ನಿರ್ದಿಷ್ಟ ಕಟ್ಟಿಂಗ್ ರಚನೆ ಮತ್ತು ಡ್ರಿಲ್ಲಿಂಗ್ ಮಾರ್ಗದರ್ಶಿ ಮತ್ತು ಕಸ್ಟಮೈಸ್ ಮಾಡಿದ ಇಂಪ್ಲಾಂಟ್‌ಗಳು ಮತ್ತು ಇಂಪ್ಲಾಂಟ್ ಅಚ್ಚುಗಳ ಅಭಿವೃದ್ಧಿ ಒಳಗೊಂಡು ಸುಧಾರಿತ ವೈದ್ಯಕೀಯ 3ಡಿ ಡಿಸೈನ್ (ವಿನ್ಯಾಸ) ಮತ್ತು ಪ್ರಿಂಟಿಂಗ್ (ಮುದ್ರಣ) ಸೇವೆಗಳನ್ನು ಇದು ಒದಗಿಸುತ್ತದೆ ಎಂದರು.
ಕುಡುಪು ಕ್ಷೇತ್ರದಲ್ಲಿ ಭಕ್ತಿಪೂರ್ವಕ ಷಷ್ಠಿ ಮಹೋತ್ಸವ, ಸಹಸ್ರಾರು ಮಂದಿ ಭಾಗಿ
ಷಷ್ಠಿ ಮಹೋತ್ಸವ ಪ್ರಯುಕ್ತ 5 ಸಾವಿರ ಪಂಚಾಮೃತ ಅಭಿಷೇಕ, 20 ಸಾವಿರಕ್ಕೂ ಮಿಕ್ಕಿ ನಾಗತಂಬಿಲ ಸೇವೆಗಳು ನಡೆದವು. ದೇವರಿಗೆ ಹಾಲು, ಸೀಯಾಳ, ಹಿಂಗಾರ, ಚಿನ್ನ ಹಾಗೂ ಬೆಳ್ಳಿಯ ಹರಕೆ, ಹೂವುಗಳನ್ನು ಅರ್ಪಿಸಿ ಪುನೀತರಾದರು. ಸಂಜೆಯಯವರೆಗೆ 15ಸಾವಿರಕ್ಕೂ ಅಧಿ​ಕ ಮಂದಿ ಅನ್ನಪ್ರಸಾದ ಸ್ವೀಕರಿಸಿದರು.
ಬೆಳ್ತಂಗಡಿ ತಾಲೂಕು ಸಾಹಿತ್ಯ ಸಮ್ಮೇಳನ ಸಮಾರೋಪ
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಬೆಳ್ತಂಗಡಿ ತಾಲೂಕು ಘಟಕ ವತಿಯಿಂದ ವಾಣಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಭಾನುವಾರ ರಮಾನಂದ ಸಾಲಿಯಾನ್ ವೇದಿಕೆಯಲ್ಲಿ ಸುವರ್ಣ ಕರ್ನಾಟಕ ಭಾಷೆ - ಸಾಹಿತ್ಯ- ಸಂಸ್ಕೃತಿ ಆಶಯದಲ್ಲಿ ನಡೆದ ಬೆಳ್ತಂಗಡಿ ತಾಲೂಕು 18ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸುಳ್ಯ ನೆಹರು ಸ್ಮಾರಕ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಪೂವಪ್ಪ ಕಣಿಯೂರು ಸಮಾರೋಪ ಭಾಷಣ ಮಾಡಿದರು.
ಹಸಿತ್ಯಾಜ್ಯ ಸಿಎನ್‌ಜಿ ಮಾರುಕಟ್ಟೆಗೆ ಶೀಘ್ರ ಅನುಮತಿ: ರಾಜೇಶ್‌ ನಾಯ್ಕ್‌
ಈ ಹಸಿ ತ್ಯಾಜ್ಯದಿಂದ ಅನಿಲದ ಜತೆಗೆ ನಿತ್ಯ 15 ಕೆಜಿಯಷ್ಟುಗೊಬ್ಬರವೂ ಈ ಘಟಕದ ಮೂಲಕ ತಯಾರಾಗುತ್ತಿದೆ. ಸುಮಾರು 60 ಸೆಂಟ್ಸ್‌ ಪ್ರದೇಶದಲ್ಲಿ ಈ ಘಟಕವನ್ನು ರಚಿಸಲಾಗಿದ್ದು, ಸುಮಾರು 4 ಕೋಟಿ ರು.ಗಳಷ್ಟುಹೂಡಿಕೆ ಮಾಡಲಾಗಿದೆ. ಇನ್ನೂ 15 ಟನ್‌ ಹಸಿ ತ್ಯಾಜ್ಯ ವಿಲೇವಾರಿ ಮಾಡಲು ಜಾಗವಿದ್ದು, ಇನ್ನಷ್ಟು ಹಸಿ ತ್ಯಾಜ್ಯ ದೊರೆತದೆ ಇನ್ನೊಂದು ಘಟಕ ರಚನೆಗೆ ಸಿದ್ಧ ಇರುವುದಾಗಿ ರಾಜೇಶ್‌ ನಾಯ್ಕ್‌ ತಿಳಿಸಿದರು.
  • < previous
  • 1
  • ...
  • 616
  • 617
  • 618
  • 619
  • 620
  • 621
  • 622
  • 623
  • 624
  • ...
  • 654
  • next >
Top Stories
ಹಣ ಇಟ್ಟು ಆಡುವ ಎಲ್ಲಾ ಆನ್‌ಲೈನ್‌ ಗೇಮ್‌ಗಳು ಕಡ್ಡಾಯ ನಿಷೇಧ
ಎಸ್ಸಿಎಸ್ಪಿ/ಟಿಎಸ್‌ಪಿ 13 ಸಾವಿರ ಕೋಟಿ ಅನುದಾನ ‘ಗ್ಯಾರಂಟಿ’ಗೆ ಬಳಕೆ
ಅನನ್ಯಾ ನಾಪತ್ತೆ ನಿಜವೆ?:ತನಿಖೆ ಹೊಣೆ ಎಸ್ಐಟಿಗೆ
ಪ್ರಧಾನಿ, ಸಿಎಂ ಜೈಲಿಂದ ಅಧಿಕಾರದ ಬಗ್ಗೆ ಜನ ತೀರ್ಮಾನಿಸಬೇಕಿದೆ : ಅಮಿತ್‌
ಮಾಸ್ಕ್‌ ಮ್ಯಾನ್‌ ಆರೋಪಸುಳ್ಳು : ಸಹೋದ್ಯೋಗಿ ನುಡಿ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved