ಸ್ನಾತಕೋತ್ತರ ಪದವಿ ಪ್ರವೇಶ ಪರೀಕ್ಷೆಯ ಕೀ ಉತ್ತರದಲ್ಲೇ ತಪ್ಪು!ಪದವಿ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪ್ರವೇಶಕ್ಕೆ ಕೆಇಎ ನಡೆಸುವ ಪ್ರವೇಶ ಪರೀಕ್ಷೆ(ಪಿಜಿ ಸಿಇಟಿ)ಗೆ ಹಾಜರಾಗಿದ್ದರು. ಎಂಬಿಎ ಹಾಗೂ ಎಂಸಿಎ ಆಕಾಂಕ್ಷಿಗಳು ಸೆ.24ರಂದು ಪ್ರವೇಶ ಪರೀಕ್ಷೆ ಬರೆದಿದ್ದರು. ಇದರ ಕೀ ಉತ್ತರಗಳನ್ನು ಒಂದು ವಾರದ ಬಳಿಕ ಕೆಇಎ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಆಗ ಅದರಲ್ಲಿ ತಪ್ಪು ಉತ್ತರ ಗೋಚರಿಸಿದೆ.