ಬಾಂಗ್ಲಾದಲ್ಲಿ ಹಿಂದುಗಳು, ಚಿನ್ಮಯ್ ಕೃಷ್ಣದಾಸರನ್ನು ರಕ್ಷಿಸಿಬಾಂಗ್ಲಾದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದು ಸಮುದಾಯದ ರಕ್ಷಣೆ ಹಾಗೂ ಅಲ್ಲಿಯ ಇಸ್ಕಾನ್‌ನ ಸಂತ ಚಿನ್ಮಯ್ ಕೃಷ್ಣದಾಸ್ ಅವರ ಬಿಡುಗಡೆ ಹಾಗೂ ಮತಾಂಧರ ದಾಳಿಯಿಂದ ನಾಶಗೊಂಡ ಹಿಂದುಗಳ ಮನೆ, ದೇವಾಲಯ, ಆಸ್ತಿಗಳನ್ನು ಪುನಾ ನಿರ್ಮಿಸುವಂತೆ ವಿಶ್ವ ಸಮುದಾಯದ ಮೂಲಕ ಬಾಂಗ್ಲಾ ದೇಶದ ಮೇಲೆ ಒತ್ತಡ ಹೇರುವಂತೆ ದಾವಣಗೆರೆ ಹಿಂದೂ ಹಿತರಕ್ಷಣಾ ಸಮಿತಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿತು.