ಏಳೂರು ಕರಿಯಮ್ಮ ಜಾತ್ರೆ: ದೇವರುಗಳ ಅದ್ಧೂರಿ ಮೆರವಣಿಗೆಮಲೇಬೆನ್ನೂರು ಸಮೀಪದ ಹಾಲಿವಾಣ ಗ್ರಾಮದ ಏಳೂರು ಕರಿಯಮ್ಮದೇವಿ ಜಾತ್ರೆಗೆ ಎರಡನೇ ದಿನ ಮಂಗಳವಾರ ಏಳೂರಿನ ಎಲ್ಲ ದೇವರ ಅದ್ಧೂರಿ ಮೆರವಣಿಗೆ ನಡೆಯಿತು. ಹಾಲಿವಾಣ, ಎರೆಹಳ್ಳಿ, ಕೊಪ್ಪ, ದಿಬ್ಬದಹಳ್ಳಿ, ಚಿಕ್ಕಹಾಲಿವಾಣ ಮತ್ತು ಬೇಚಾರ್ ಗ್ರಾಮದ ದೇವರುಗಳ ಸಮ್ಮುಖ ಹಾಲಿವಾಣದ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಯಿತು. ಆರು ಗಂಟೆಗಳ ಕಾಲ ಬಿಸಿಲೆನ್ನದೇ ತಲೆಗೆ ನೀರು ಹಾಕಿಕೊಂಡು ಹೆಜ್ಜೆ ಹಾಕುತ್ತಾ ಮೆರವಣಿಗೆ ನಡೆದಿದ್ದು ವಿಶೇಷ.