• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • davanagere

davanagere

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಅಭಿವೃದ್ಧಿ ಪಟ್ಟಿ ಈಗಾಗಲೇ ಸಿದ್ಧ, ಸೇವೆಗೆ ಅಧಿಕಾರ ನೀಡಿ
ದಾವಣಗೆರೆ ಲೋಕಸಭಾ ಕ್ಷೇತ್ರದ ಎಲ್ಲ ತಾಲೂಕುಗಳ ಸಮಸ್ಯೆಗಳು, ಆಗಬೇಕಾದ ಅಭಿವೃದ್ಧಿ ಕೆಲಸಗಳ ಸ್ಪಷ್ಟ ಮಾಹಿತಿ ತಮ್ಮ ಬಳಿ ಸಿದ್ಧವಿದೆ. ಕ್ಷೇತ್ರದ ಜನರ ಆಶೀರ್ವಾದದಿಂದ ಜೂನ್ 4ರ ಫಲಿತಾಂಶ ಬಂದು ಜಯಶಾಲಿಯಾದರೆ ನನ್ನ ಬಳಿ ಸಿದ್ಧವಿರುವ ಅಭಿವೃದ್ಧಿ ಕಾರ್ಯ ಯೋಜನೆಗಳಿಗೆ ಚಾಲನೆ ನೀಡಲಾಗುವುದು ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಹೊನ್ನಾಳಿಯಲ್ಲಿ ಹೇಳಿದ್ದಾರೆ.
ಹರಿಹರದಲ್ಲಿ ಶ್ರೀ ನೀಲಕಂಠೇಶ್ವರ ಶಿಲಾಮೂರ್ತಿಗಳ ಮೆರವಣಿಗೆ
ಹರಿಹರ ನಗರದ ಮೆಟ್ಟಿಲು ಹೊಳೆ ರಸ್ತೆಯ ನೇಕಾರ ಕುರುಹಿನಶೆಟ್ಟಿ ಸಮಾಜದ ದೇವಸ್ಥಾನದಲ್ಲಿ ಏ.೪ರಂದು, ಶ್ರೀ ಜಗದ್ಗುರು ನಾಲ್ವಡಿ ನೀಲಕಂಠ ಪಟ್ಟದಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಶ್ರೀ ಕಾಶಿ ನೀಲಕಂಠೇಶ್ವರ ಸ್ವಾಮಿ ಹಾಗೂ ಗಣಪತಿ ನಂದಿ ದೇವರ ಮೂರ್ತಿ ಪ್ರಾಣ ಪ್ರತಿಷ್ಟಾಪನೆ ಹಾಗೂ ಕಳಸಾರೋಹಣ ನಡೆಯಲಿದೆ. ಈ ಹಿನ್ನೆಲೆ ಭಾನುವಾರ ಕುರುಹಿನಶೆಟ್ಟಿ ಸಮಾಜದಿಂದ ದೇವರ ನೂತನ ಶಿಲಾಮೂರ್ತಿಗಳ ಮೆರವಣಿಗೆಗೆ ಬೆಟಗೇರಿಯ ಶ್ರೀ ನಾಲ್ಮಡಿ ನೀಲಕಂಠ ಪಟ್ಟದಾರ್ಯ ಶ್ರೀ ಚಾಲನೆ ನೀಡಿದರು.
ಭೋವಿ ಸಚಿವರ ನಿಂದಿಸಿರುವ ಸಿ.ಟಿ.ರವಿ ಕ್ಷಮೆ ಕೇಳಲಿ
ಮಹಿಳೆಯರನ್ನು ಪೂಜನೀಯ ಸ್ಥಾನದಲ್ಲಿಟ್ಟು ನೋಡುವ ಪವಿತ್ರವಾದ ಭಾರತೀಯ ಸಂಸ್ಕೃತಿಯು ನಮ್ಮದಾಗಿದೆ. ಹೀಗಿರುವಾಗ ಬಿಜೆಪಿಯ ನಾಯಕ ಸಿ.ಟಿ.ರವಿ ಅವರು ಸಚಿವ ಶಿವರಾಜ್ ತಂಗಡಗಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಭೋವಿ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ತಾಲೂಕು ಭೋವಿ ಸಮಾಜ ಅಧ್ಯಕ್ಷ ಗರಗ ರಾಜಪ್ಪ ಚನ್ನಗಿರಿಯಲ್ಲಿ ದೂರಿದ್ದಾರೆ.
ಹಾಲಿವಾಣ ಜಾತ್ರೆಯಲ್ಲಿ ಧರ್ಮ ನಿಂದನೆ, ಪ್ರಾಣಿಬಲಿ ನಿಷೇಧ
ಏ.೧ರಿಂದ ೫ ರವರೆಗೆ ಮಲೇಬೆನ್ನೂರು ಪೋಲೀಸ್ ಠಾಣಾ ಸರಹದ್ದಿನ ಹಾಲಿವಾಣ ಗ್ರಾಮದಲ್ಲಿ ಏಳೂರು ಕರಿಯಮ್ಮದೇವಿ ಜಾತ್ರೆ ನಡೆಯಲಿದೆ. ಈ ಹಿನ್ನೆಲೆ ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್ ಮಾರ್ಗದರ್ಶನದಲ್ಲಿ ಹಾಲಿವಾಣ ಗ್ರಾಮದ ಕರಿಯಮ್ಮ ದೇವಾಲಯ ಆವರಣದಲ್ಲಿ ಹರಿಹರ ತಹಸೀಲ್ದಾರ್ ಗುರುಬಸವರಾಜ್ ಅಧ್ಯಕ್ಷತೆಯಲ್ಲಿ ಹೆಚ್ಚುವರಿ ಅಧೀಕ್ಷಕ ವಿಜಯ್‌ಕುಮಾರ್ ಸಂತೋಷ್, ಗ್ರಾಮಾಂತರ ಉಪಾಧೀಕ್ಷಕ ಪ್ರಶಾಂತ್ ಉಪಸ್ಥಿತಿಯಲ್ಲಿ ಸೌಹಾರ್ದ ಸಭೆ ನಡೆಸಲಾಯಿತು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಶ್ರೇಷ್ಠ ಕಾರ್ಯ: ಉಪನ್ಯಾಸಕಿ ಉಷಾ
ಚುನಾವಣೆಯಲ್ಲಿ ಯೋಗ್ಯ ಅಭ್ಯರ್ಥಿಗೆ ಮತ ನೀಡುವ ಮೂಲಕ ಸಂವಿಧಾನ ನಮಗೆ ನೀಡಿರುವ ಮತದಾನದ ಹಕ್ಕನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಶ್ರೇಷ್ಠ ಕಾರ್ಯ. ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೇ, ಭಯ, ಆತಂಕಪಡದೇ ಯೋಗ್ಯರಿಗೆ ಮತ ಚಲಾಯಿಸಬೇಕು ಎಂದು ಉಪನ್ಯಾಸಕಿ ಈ. ಉಷಾ ಹರಿಹರದಲ್ಲಿ ಹೇಳಿದ್ದಾರೆ.
ಮಯಂಕ್ ಮಹಾವೀರ ಜೈನ್‌ ಸನ್ಯಾಸ ದೀಕ್ಷೆ: ಸಮರ್ಥ್ ಶಾಮನೂರು ಶುಭ ಹಾರೈಕೆ
ದಾವಣಗೆರೆ ನಗರದ ಶ್ರೀ ಸಂಘವಿ ಮಹಾವೀರ ಜೈನ್‌ ಅವರ ಪುತ್ರ, 18ರ ಹರೆಯದ ಮಯಂಕ್ ಏಪ್ರಿಲ್ 1ರಂದು ಲೌಕಿಕ ಸುಖಮಯ ಬದುಕಿನಿಂದ ನಿರ್ಗಮಿಸಿ, ಅತ್ಯಂತ ಕಠಿಣವಾದ ಜನ್ಮ ಜನ್ಮಾಂತರಗಳ ಹುಟ್ಟು -ಸಾವುಗಳ ಜಂಜಾಟಗಳಿಂದ ಮುಕ್ತಿ ಹೊಂದಬಹುದಾದಂತಹ ಜೈನ ಸನ್ಯಾಸ ದೀಕ್ಷೆ ಸ್ವೀಕರಿಸಲಿದ್ದಾರೆ.
ದಲಿತರ ಸಮಾಧಿ ಮೇಲೆ ಕಾಂಗ್ರೆಸ್ ಅಧಿಕಾರ
ದಲಿತರನ್ನು ತುಳಿದು, ಬೆನ್ನಿಗೆ ಚೂರಿ ಹಾಕುವ ಮೂಲಕ ಅದೇ ದಲಿತರ ಸಮಾಧಿ ಮೇಲೆ ಕುಳಿದು ಕಾಂಗ್ರೆಸ್ ಪಕ್ಷವು ಅಧಿಕಾರ ನಡೆಸುತ್ತಿದೆ. ತನ್ನ ಮತ ಬ್ಯಾಂಕ್ ಆಗಿ ಬಳಸಿಕೊಳ್ಳುವ ಮೂಲಕ ದಲಿತರಿಗೆ ಇನ್ನಿಲ್ಲದಷ್ಟು ಅನ್ಯಾಯ ಮಾಡಿದೆ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಹನುಮಂತ ನಾಯ್ಕ ದಾವಣಗೆರೆಯಲ್ಲಿ ಆರೋಪಿಸಿದ್ದಾರೆ.
ಖಾಸಗಿ ಬೋರ್‌ಗಳ ಬಳಸಿ, ಕುಡಿವ ನೀರು ಸಮಸ್ಯೆ ನೀಗಿ
ಬೇಸಿಗೆ ತಾಪಮಾನ ಹೆಚ್ಚಳವಾಗಿದ್ದು, ಎಲ್ಲ ಕಡೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುವ ನಿರೀಕ್ಷೆ ಹೆಚ್ಚಾಗಿದೆ. ಈ ಹಿನ್ನೆಲೆ ತಕ್ಷಣ ಕುಡಿಯುವ ನೀರಿನ ಸಮರ್ಪಕ ಪೂರೈಕೆಗಾಗಿ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಬೇಕು. ನೀರಿನ ಸಮಸ್ಯೆ ತಲೆದೋರಿದ ಕಡೆಗಳಲ್ಲಿ ತಕ್ಷಣವೇ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಪರಿಹಾರ ಕಲ್ಪಿಸುವ ಕೆಲಸ ಮಾಡಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಅಧ್ಯಕ್ಷ ಡಾ. ಎಂ.ವಿ. ವೆಂಕಟೇಶ್ ದಾವಣಗೆರೆಯಲ್ಲಿ ಸೂಚಿಸಿದ್ದಾರೆ.
ಗೆಲ್ಲಿಸಿದರೆ ನಿಮ್ಮ ಧ್ವನಿಯಾಗಿ ಕೆಲಸ: ಡಾ.ಪ್ರಭಾ
ಲೋಕಸಭಾ ಚುನಾವಣೆಯಲ್ಲಿ ಮತದಾರರೆಲ್ಲ ನನಗೆ ಮತ ಹಾಕಿ ಗೆಲ್ಲಿಸಿ, ನಿಮ್ಮ ಧ್ವನಿಯಾಗಿ ಕೆಲಸ ಮಾಡುವೆ. ನಮ್ಮ ಮನೆ. ಮನಸ್ಸಿನ ಬಾಗಿಲು ಯಾವಾಗಲೂ ತೆಗೆದಿರುತ್ತೆ. ಮಾವ ಶಾಮನೂರು ಶಿವಶಂಕರಪ್ಪ ಹಾಗೂ ಪತಿ ಎಸ್.ಎಸ್. ಮಲ್ಲಿಕಾರ್ಜುನ ಅವರಿಂದ ನಾನು ಸಾಕಷ್ಟು ಸಮಾಜ ಸೇವೆ ಕಲಿತಿದ್ದೇನೆ ಎಂದು ಹೇಳಿದರು. ದೇಶದಲ್ಲಿ ಬಿಜೆಪಿ ಸರ್ವಾಧಿಕಾರಿಯಾಗಿ ಆಡಳಿತ ನಡೆಸುತ್ತಲಿದೆ, ಬರ ಅನುದಾನ ನಮ್ಮ ರಾಜ್ಯಕ್ಕೆ ನೀಡಿಲ್ಲ. ನನಗೆ ಮತ ಹಾಕಿ ಗೆಲ್ಲಿಸಿದರೆ ತ್ರಿಬಲ್ ಎಂಜಿನ್‌ ಸರ್ಕಾರವಾಗುತ್ತದೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಮನವಿ ಮಾಡಿದ್ದಾರೆ.
ಲೋಕ ಉದ್ಧಾರಕ್ಕಾಗಿಯೇ ಸ್ತ್ರೀ ಜನನ: ಓಂಕಾರೇಶ್ವರ ಶ್ರೀ
ಮಹಿಳೆ ಮನೆಗೆ ಮೂಲಾಧಾರವಾಗಿದ್ದು, ಶಿಲ್ಪಿಯಾಗಿ, ಗುರುವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಳೆ ಎಂದು ಆವರಗೊಳ್ಳ ಹಿರೇಮಠದ ಓಂಕಾರೇಶ್ವರ ಶಿವಾಚಾರ್ಯ ಸ್ವಾಮೀಜಿ ಮಲೇಬೆನ್ನೂರಲ್ಲಿ ನುಡಿದಿದ್ದಾರೆ.
  • < previous
  • 1
  • ...
  • 549
  • 550
  • 551
  • 552
  • 553
  • 554
  • 555
  • 556
  • 557
  • ...
  • 637
  • next >
Top Stories
ಕಬ್ಬು ಬೆಳೆಗಾರರ ಹೋರಾಟ ಕುರಿತು ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪತ್ರ
ಸ್ಥಳೀಯ ಭಾಷಿಕರನ್ನೇ ಬ್ಯಾಂಕ್‌ ನೌಕರಿಗಳಿಗೆ ನೇಮಿಸಿ : ನಿರ್ಮಲಾ
ಸಕ್ಕರೆ ಕಾರ್ಖಾನೆ, ರೈತರ ಜತೆಗಿಂದು ಸಿಎಂ ಸಭೆ
ಅಮೆರಿಕಕ್ಕೂ ತಲುಪಿತು ಭಾರತದ ಗ್ಯಾರಂಟಿ ಭರಾಟೆ !
ವಂದೇ ಮಾತರಂ - 150ನೇ ವಾರ್ಷಿಕೋತ್ಸವ : ಸಾಂಸ್ಕೃತಿಕ ರಾಷ್ಟ್ರೀಯತೆಯ ಘೋಷಣೆ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved