ಸಮಾಜ ತಿದ್ದಲು ವಚನ ಸಾಹಿತ್ಯ ಕೈಗನ್ನಡಿ: ಡಾ.ಅನಿತಾಪ್ರಪಂಚದ ಅತ್ಯದ್ಭುತಗಳಲ್ಲಿ ಒಂದಾದ ‘ವಚನ ಸಾಹಿತ್ಯ’ವು ಮನಸ್ಸಿನ, ಸಮಾಜದ ಅಂಕುಡೊಂಕುಗಳ ತಿದ್ದುವುದಕ್ಕೆ ಕೈಗನ್ನಡಿಯಾಗಿವೆ. ಇತಿಹಾಸ ಸಂಶೋಧಕರು, ನಾಟಕ ರಚನೆಕಾರರು, ಹಾಡು ಕಟ್ಟುವವರು, ಸಮಾಜ ಸುಧಾರಕರು, ಅಧ್ಯಾತ್ಮ ಸಾಧಕರು ಹಾಗೂ ಲೋಕದ ಅನುಭವ ಬಯಸುವವರಿಗೆ ವಚನ ಸಾಹಿತ್ಯ ಸ್ಫೂರ್ತಿಯಾಗಿವೆ ಎಂದು ಎಸ್‌ಎಸ್‌ಎಂಬಿ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಅನಿತಾ ಎಚ್. ದೊಡ್ಡಗೌಡರ್ ದಾವಣಗೆರೆಯಲ್ಲಿ ಹೇಳಿದ್ದಾರೆ.