ವಿಚ್ಛೇದನ ಬಿಟ್ಟು ಮತ್ತೆ ಒಂದಾದ 23 ಜೋಡಿಗಳುಕೌಟುಂಬಿಕ ಕಲಹ, ತಪ್ಪುಗ್ರಹಿಕೆ ಸೇರಿದಂತೆ ನಾನಾ ಕಾರಣಕ್ಕೆ ಮನಸ್ತಾಪ ಉಂಟಾಗಿ, ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದ 23 ಜೋಡಿಗಳು ತಮ್ಮೆಲ್ಲಾ ಮುನಿಸುಗಳನ್ನು ಮರೆತು, ಜಿಲ್ಲೆಯ ನ್ಯಾಯಾಧೀಶರು, ವಕೀಲರ ಸಮಕ್ಷಮ ಮತ್ತೆ ಒಂದಾಗಿ, ಬಾಳುವ ಸಂಕಲ್ಪ ಮಾಡಿ, ಹಾರ ಬದಲಿಸಿಕೊಂಡು ಬಾಂಧವ್ಯಗಳನ್ನು ಬೆಸೆಯುವ ಕ್ಷಣಗಳಿಗೆ ಲೋಕ್ ಅದಾಲತ್ ಶನಿವಾರ ಸಾಕ್ಷಿಯಾಯಿತು.