ಸರ್ಕಾರಿ ಶಾಲೆಗಳಂತ ಅಸಡ್ಡೆ ಬೇಡ: ಶಾಸಕ ಬಸವಂತಪ್ಪಸರ್ಕಾರಿ ಶಾಲೆಗಳು ಅಂದರೆ ಸಾಕು, ಕೆಲ ಜನರಿಗೆ ಅಸಡ್ಡೆ. ಅಲ್ಲಿ ಮಕ್ಕಳು ಕಲಿಯೋದಿಲ್ಲ, ಸರಿಯಾಗಿ ಕಲಿಸೋರು ಇರಲ್ಲ, ಸೌಲಭ್ಯಗಳಂತೂ ಇಲ್ಲವೇ ಇಲ್ಲ ಎನ್ನುವ ಪೋಷಕರಿದ್ದಾಎರ. ಅಂಥವರ ಆರೋಪಕ್ಕೆ ಆನಗೋಡು ಗ್ರಾಮದ ಸರ್ಕಾರಿ ಶಾಲೆ ಶೈಕ್ಷಣಿಕ ಪ್ರಗತಿ, ಮಕ್ಕಳ ಹಾಜರಾತಿಯಲ್ಲಿ ಹೆಚ್ಚು ಮೇಲುಗೈ ಸಾಧಿಸಿದೆ ಎಂದು ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್. ಬಸವಂತಪ್ಪ ದಾವಣಗೆರೆಯಲ್ಲಿ ಹೇಳಿದ್ದಾರೆ.