ಇಂದಿನಿಂದ ಜಿಎಂ ವಿ.ವಿ.ಯಿಂದ ಜಿಎಂ ಲೀಗ್ ಕ್ರೀಡಾಹಬ್ಬಜಿ.ಎಂ. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವ್ಯವಹಾರಗಳ ನಿರ್ದೇಶನಾಲಯ ಹಾಗೂ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗ ವತಿಯಿಂದ ಫೆ.4ರಿಂದ 15ರವರೆಗೆ ಜಿಎಂ ವಿಶ್ವವಿದ್ಯಾಲಯದ ಕ್ರೀಡಾ ಮೈದಾನದಲ್ಲಿ ಪ್ರಥಮ ಬಾರಿಗೆ ಐಪಿಎಲ್ ಮಾದರಿಯಲ್ಲಿ ಜಿಎಂ ಲೀಗ್ ಕ್ರೀಡಾ ಹಬ್ಬ ನಡೆಯಲಿದೆ. 11 ದಿನಗಳ ಕಾಲ ಕ್ರಿಕೆಟ್, ವಾಲಿಬಾಲ್, ಖೊ ಖೋ, ಥ್ರೋ ಬಾಲ್ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ ಎಂದು ನಿರ್ದೇಶಕ ಡಾ. ಎಚ್.ಎಸ್.ಕಿರಣ್ ಕುಮಾರ್ ಹೇಳಿದ್ದಾರೆ.