ಮಲೇಬೆನ್ನೂರಲ್ಲಿ ಉರುಸ್‌ಗೆ ಚಾಲನೆ: ಸಾಮರಸ್ಯ ಮೆರೆದ ಹಿಂದೂ ಬಾಂಧವರುಹರಿಹರ ತಾಲೂಕು ಮಲೇಬೆನ್ನೂರು ಪಟ್ಟಣದ ಸೈಯದ್ ಹಬೀಬುಲ್ಲಾ ಷಾ ಖಾದ್ರಿ ಉರುಸ್‌ಗೆ ಬುಧವಾರ ವಿಧ್ಯುಕ್ತ ಚಾಲನೆ ದೊರೆಯಿತು. ಪಟ್ಟಣದಲ್ಲಿ ಪ್ರಥಮ ಬಾರಿಗೆ ಚುನಾಯಿತ ಆಡಳಿತ ಮಂಡಳಿಯ ಯುವ ಸದಸ್ಯರು ಮುಂಚೂಣಿಯಲ್ಲಿದ್ದು, ಉರುಸ್ ಮತ್ತು ಗಂಧ ನಡೆಸಲು ಸಿದ್ಧರಾಗಿದ್ದಾರೆ. ಮೊದಲ ದಿನವೇ ದರ್ಗಾ ಆವರಣದಲ್ಲಿ ಹಿಂದೂ ಬಾಂಧವರು ಸೇರಿ ೨೫,೦೦೦ ಸಾವಿರ ಭಕ್ತರಿಗೆ ಅನ್ನ ಸಂತರ್ಪಣೆ ನೀಡಿ ಕೋಮು ಸಾಮರಸ್ಯ, ಧನ್ಯತೆ ಮೆರೆದರು. ರಾತ್ರಿವರೆಗೂ ಅನ್ನ ಸಂತರ್ಪಣೆ ನಡೆಯಲಿದೆ ಎಂದು ತಿಳಿಸಲಾಗಿದೆ.