ದುಷ್ಟಶಕ್ತಿಗಳ ವಿರುದ್ಧ ಪ್ರತಿಯೊಬ್ಬರೂ ವೀರಭದ್ರನಂತೆ ಮೆಟ್ಟಿನಿಲ್ಲಬೇಕು: ರಂಭಾಪುರಿ ಶ್ರೀಸಮಾಜದಲ್ಲಿ ಶಕುನಿಗಳು, ದುಷ್ಟರು, ಹಿಂದು ಸಂಸ್ಕೃತಿಯನ್ನು ಅಲ್ಲಗಳೆಯವವರು ನಿರಂತರ ಸಮಾಜಕ್ಕೆ ತೊಂದರೆ ಕೊಡುತ್ತಿರುತ್ತಾರೆ. ಆದರೆ, ಪ್ರತಿಯೊಬ್ಬರೂ ವೀರಭದ್ರನಂತೆ ದುಷ್ಟಶಕ್ತಿಗಳ ವಿರುದ್ಧ ಮೆಟ್ಟಿನಿಲ್ಲುವಂತಾಗಬೇಕು ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸಿಂಹಾನನಾಧೀಶ್ವರ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಶ್ರೀ ನುಡಿದರು.