ನಕಲಿ ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹಚರ್ಮ ಹಾಗೂ ಕೂದಲು ಚಿಕಿತ್ಸೆಯಲ್ಲಿ ತೊಡಗಿರುವ ಯಾವುದೇ ವೈದ್ಯಕೀಯ ಪದವಿ ಇಲ್ಲದ ನಕಲಿ ವೈದ್ಯರ ವಿರುದ್ಧ ಅಗತ್ಯ ಕಾನೂನು ಕ್ರಮ ಜರುಗಿಸಬೇಕು ಎಂದು ಭಾರತೀಯ ಚರ್ಮರೋಗ, ಕುಷ್ಠರೋಗ, ಲೈಂಗಿಕ ರೋಗಗಳ ತಜ್ಞರ ಸಂಘ ಕರ್ನಾಟಕ ಶಾಖೆಯ ಕರೆಯ ಮೇರೆಗೆ ಗದಗ ಜಿಲ್ಲಾ ಘಟಕ ಹಾಗೂ ಗದಗ ಐಎಂಎ ವತಿಯಿಂದ ಜಿಲ್ಲಾಡಳಿತಕ್ಕೆ ಬುಧವಾರ ಮನವಿ ಸಲ್ಲಿಸಲಾಯಿತು.