ಗುಡ್ಡಗಳನ್ನು ಸರಿಯಾಗಿ ಕಡಿದಿರುವುದೇ ಕುಸಿತಕ್ಕೆ ಪ್ರಮುಖ ಕಾರಣ ಭಾರೀ ಮಳೆಯಿಂದಾಗಿ ಸಕಲೇಶಪುರ ತಾಲೂಕಿನ ದೊಡ್ಡ ತಪ್ಪಲೆ ಬಳಿ ರಾಷ್ಟ್ರೀಯ ಹೆದ್ದಾರಿ 75ರ ಮೇಲೆ ಕಳೆದ ಹಲವು ದಿನಗಳಿಂದ ಗುಡ್ಡ ಕುಸಿಯುತ್ತಿದ್ದು, ಪರಿಸ್ಥಿತಿಯ ಗಂಭೀರತೆ ಅರಿತು ಶನಿವಾರ ಭೇಟಿ ನೀಡಿ ಭೂ ಕುಸಿತವಾಗಿರುವುದನ್ನು ವೀಕ್ಷಣೆ ಮಾಡಿ ಪರಿಶೀಲನೆ ಮಾಡಿದರು. ರಾಷ್ಟ್ರೀಯ ಹೆದ್ದಾರಿ ೭೫ರ ಚತುಷ್ಪಥ ರಸ್ತೆ ಅಗಲೀಕರಣಕ್ಕಾಗಿ ಶಿರಾಡಿಯ ದೊಡ್ಡತಪ್ಪಲೆ ಬಳಿ ಗುಡ್ಡಗಳನ್ನು ೯೦ ಡಿಗ್ರಿಯಲ್ಲಿ ಕಡಿದಾಗಿ ಸೀಳಿರುವುದು ಗುಡ್ಡ ಕುಸಿತಕ್ಕೆ ಇರುವ ಪ್ರಮುಖ ಕಾರಣಗಳಲ್ಲಿ ಒಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.