ನೌಕರರ ಶ್ರಮಕ್ಕೆ ತಕ್ಕಂತೆ ಸೌಲಭ್ಯ ನೀಡಿ: ಕೃಷ್ಣೇಗೌಡ ಒತ್ತಾಯಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ನೌಕರರ ಅವಶ್ಯಕತೆ ಇದೆ. ಅವರ ಬೇಡಿಕೆಗಳನ್ನ ಈಡೇರಿಸಲು ಏಕೆ ತಾತ್ಸಾರ, ನಮ್ಮ ಶ್ರಮಕ್ಕೆ ತಕ್ಕಂತೆ ಸೌಲಭ್ಯವನ್ನು ನೀಡಿ ಎಂದು ರಾಜ್ಯ ಸರ್ಕಾರವನ್ನು ಹಾಸನ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಕೃಷ್ಣೇಗೌಡ ಒತ್ತಾಯಿಸಿದರು. ಶಾಸಕ ಮಂಜು ಅವರಿಗೆ ಭಾನುವಾರ ಅರಕಲಗೂಡಲ್ಲಿ ಆಯೋಜಿಸಿದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.