ವಿಜೃಂಭಣೆಯ ಗುತ್ತಿನಕೆರೆ ರಂಗನಾಥ ಸ್ವಾಮಿ ಮಹಾರಥೋತ್ಸವ ಅರಸೀಕೆರೆತಾಲೂಕಿನ ಸುಕ್ಷೇತ್ರ ಗುತ್ತಿನಕೆರೆ ರಂಗನಾಥ ಸ್ವಾಮಿಯ ಮಹಾರಥೋತ್ಸವವು ಸಹಸ್ರಾರು ಭಕ್ತಾದಿಗಳ ಗೋವಿಂದ ನಾಮ ಸ್ಮರಣೆಯೊಂದಿಗೆ ಸಡಗರ ಸಂಭ್ರಮದಿಂದ ವಿಜೃಂಭಣೆಯಿಂದ ಜರುಗಿತು. ಜಾತ್ರಾ ಮಹೋತ್ಸವದ ಮೊದಲನೇ ದಿನ ಕಲ್ಯಾಣೋತ್ಸವ, ಎರಡನೇ ದಿನ ಬ್ರಹ್ಮ ರಥೋತ್ಸವ, 3ನೇ ದಿನ ಮಹಾರಥೋತ್ಸವ ಹೀಗೆ ನಾಲ್ಕು ದಿನಗಳ ಕಾಲ ರಂಗನಾಥ ಸ್ವಾಮಿಯ ಜಾತ್ರಾ ಮಹೋತ್ಸವ ಭಕ್ತರ ಶ್ರದ್ಧಾ ಭಕ್ತಿಯೊಂದಿಗೆ ಜರುಗಿತು.