ಸರ್ಕಾರಿ ಕೆಪಿಎಸ್ ಶಾಲೆಗೆ ₹ ೧ ಕೋಟಿ ಅನುದಾನಹಳೇಬೀಡು ಕೆಪಿಎಸ್ ಶಾಲೆ ಹಾಸನ ಜಿಲ್ಲೆಗೆ ಮಾದರಿ ಶಾಲೆಯಾಗಿದೆ. ಇಲ್ಲಿ ೧ ರಿಂದ ೧೨ನೇ ತರಗತಿವರೆಗೆ ೧೬೦೦ ಮಕ್ಕಳು ಓದುತ್ತಿರುವ ಶಾಲೆಯಾಗಿದ್ದು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ವತಿಯಿಂದ ಕೆಪಿಎಸ್ ಶಾಲೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಉದ್ದೇಶದಿಂದ ೧ ಕೋಟಿ ರು. ಶಾಲಾ ಅಭಿವೃದ್ಧಿಯ ಅನುದಾನದ ಅನುಮೋದನೆ ಸಿಕ್ಕಿದೆ ಎಂದು ಸರ್ಕಾರಿ ಕೆಪಿಎಸ್ ಶಾಲಾ ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಬಿ.ಎಸ್. ಸೋಮಶೇಖರ್ ತಿಳಿಸಿದರು.