• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಮೈದುಂಬಿದ ಕಾವೇರಿ ನದಿಗೆ ಶಾಸಕ ಮಂಜು ಬಾಗಿನ
ಕೊಡಗಿನ ತಲಕಾವೇರಿಯಿಂದ ಹರಿಯುತ್ತಿರುವ ಪೂರ್ಣ ಕಾವೇರಿಗೆ ರಾಮನಾಥಪುರದ ವಹ್ನಿ ಪುಷ್ಕರಣಿಯಲ್ಲಿ ಮಾಜಿ ಸಚಿವ ಹಾಗೂ ಶಾಸಕ ಎ. ಮಂಜು ಅವರು ಬಾಗಿನ ಅರ್ಪಣೆ ಮಾಡಿ ಪೂಜೆ ಸಲ್ಲಿಸಿದರು. ನೆರೆಯ ಕೊಡಗು ಜಿಲ್ಲೆಯಲ್ಲಿ ಮಳೆ ಪ್ರಮಾಣ ಜಾಸ್ತಿಯಾಗುತ್ತಿದ್ದು, ಕಾವೇರಿ ನದಿಯಲ್ಲಿ ನೀರಿನ ಹರಿವು ಏರಿಕೆ ಆಗುತ್ತಿರುವುದರಿಂದ ತಗ್ಗು ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಕ್ಕೆ ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಜಿ ಸಚಿವ ಹಾಗೂ ಶಾಸಕ ಎ ಮಂಜು ಸೂಚಿಸಿದರು.
ಎಚ್‌ ಡಿ ರೇವಣ್ಣ ನೇತೃತ್ವದಲ್ಲಿ ಬೃಹತ್ ಸಮಾವೇಶ
ಕಲಾಪ ಮುಗಿದ ನಂತರ ಹಾಸನದಲ್ಲಿ ರೇವಣ್ಣ ನೇತೃತ್ವದಲ್ಲಿ ಬೃಹತ್ ಸಮಾವೇಶ ಮಾಡಲು ಯೋಚಿಸಿದ್ದೇನೆ ಎಂದು ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ತಿಳಿಸಿದರು. ಜಿಲ್ಲೆಯ ಪಕ್ಷದ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ನೈತಿಕ ಸ್ಥೈರ್ಯ ತುಂಬಲು ಎಚ್.ಡಿ. ರೇವಣ್ಣ ನೇತೃತ್ವದಲ್ಲಿ ಶೀಘ್ರದಲ್ಲೇ ಸಮಾವೇಶ ನಡೆಸುವುದಾಗಿ ತಿಳಿಸಿದರು.ಹಾಸನದಲ್ಲಿ ಬೃಹತ್ ಸಮಾವೇಶ ಮಾಡುವಂತೆ ಶಾಸಕರ ಒತ್ತಾಯ ಇದೆ. ರೇವಣ್ಣ ಅವರ ನೇತೃತ್ವದಲ್ಲಿ ಶಾಸಕರನ್ನೊಳಗೊಂಡು ನಾನೂ ಸೇರಿ ಪಕ್ಷ ಸಂಘಟನೆ ಮಾಡುತ್ತೇವೆ ಎಂದರು.
ಬಸವಾಪಟ್ಟಣ ಸೊಸೈಟಿ ಸದಸ್ಯರ ಆಯ್ಕೆ
ಬಸವಾಪಟ್ಟಣ ಗ್ರಾಮದ ಕೃಷಿಪತ್ತಿನ ಸಹಕಾರಿ ಸಂಘದ ೧೨ ಸದಸ್ಯರ ಚುನಾವಣೆಯಲ್ಲಿ ಸಾಲಗಾರರ ಕ್ಷೇತ್ರದಿಂದ ಟಿ.ಸಿ ಪ್ರಶಾಂತ್‌ ಸಾಮಾನ್ಯ, ರಮೇಶ್ ಬಿನ್ ಪುಟ್ಟೇಗೌಡ ಪ್ರವರ್ಗ ಬಿ, ಬಸವರಾಜಪ್ಪ ಸಾಮಾನ್ಯ, ರಾಮೇಗೌಡ ಸಾಮಾನ್ಯ , ಸುಬ್ರಹ್ಮಣ್ಯ ಸಾಮಾನ್ಯ, ಮಂಜುನಾಥ್‌ಶೆಟ್ಟಿ ಸಾಮಾನ್ಯ, ಚಂದ್ರಶೇಖರ್ ಪ್ರವರ್ಗ ಎ, ಮಂಜು ಪರಿಶಿಷ್ಟ ಪಂಗಡ, ರಾಜಮ್ಮ-ಮಹಿಳಾಮೀಸಲು, ಜಯಲಕ್ಷ್ಮೀ- ಮಹಿಳಾ ಮೀಸಲು, ರಂಗಯ್ಯ-ಪರಿಶಿಷ್ಟಜಾತಿ ಮೀಸಲು ಕ್ಷೇತ್ರದಿಂದ ಅವಿರೋಧ ಆಯ್ಕೆಯಾದರು. ಸಾಲಗಾರರಲ್ಲದ ಕ್ಷೇತ್ರದಿಂದ ಗಣೇಶ ಬಿ.ಜೆ ಆಯ್ಕೆಯಾದರು.
ಶಿರಾಡಿ ಅವ್ಯವಸ್ಥೆಗೆ ಅವೈಜ್ಞಾನಿಕ ಕಾಮಗಾರಿಯೇ ಕಾರಣ
ಸಕಲೇಶಪುರ ತಾಲೂಕಿನ ವಿವಿಧ ಪ್ರದೇಶದಲ್ಲಿ ಮಳೆಯಿಂದ ಹಾನಿಗೀಡಾದ ಪ್ರದೇಶವನ್ನು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್‌.ಡಿ. ಕುಮಾರಸ್ವಾಮಿ ವೀಕ್ಷಿಸಿದರು.ಶಿರೂರಿನಲ್ಲಿ ಮಳೆ ಮುಂದುವರೆದರೆ ಇನ್ನೂ ಭೂಕುಸಿತವಾಗುತ್ತದೆ. ಸಕಲೇಶಪುರದಿಂದ ಉದ್ದಕ್ಕೂ ಭೂಕುಸಿತವಾಗುತ್ತಲೇ ಇದೆ. ಎಂಟು ವರ್ಷದ ಹಿಂದಿನಿಂದ ಗುತ್ತಿಗೆದಾರ ಕೆಲಸ ಮಾಡುತ್ತಿದ್ದಾನೆ. ಕಳಪೆ ಹಾಗೂ ಅವೈಜ್ಞಾನಿಕವಾಗಿ ಕಾಮಗಾರಿ ಮಾಡಲಾಗುತ್ತಿದೆ. ಈ ಬಗ್ಗೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ವೈಜ್ಞಾನಿಕವಾಗಿ ಕಾಮಗಾರಿ ಮಾಡಲು ಚರ್ಚೆ ಮಾಡುತ್ತೇನೆ. ಸ್ಥಳಕ್ಕೆ ಒಮ್ಮೆ ಭೇಟಿ ನೀಡಲು ಮನವಿ ಮಾಡುತ್ತೇನೆ ಎಂದರು.
ಕನ್ನಡ ಪತ್ರಿಕೋದ್ಯಮ ಅತ್ಯಂತ ಕ್ರಿಯಾಶೀಲವಾಗಿದೆ
ಪತ್ರಿಕೋದ್ಯಮ ಎತ್ತ ಸಾಗಿದೆ ಮತ್ತು ಎಲ್ಲಿ ಎಡವುತ್ತಿದ್ದೇವೆ ಎಂಬುದನ್ನು ತಿಳಿದು, ಸರಿಪಡಿಸಿಕೊಂಡು ಸಾಗಬೇಕಿದೆ. ಆಸೆ, ಆಮಿಷಕ್ಕೆ ಬಲಿಯಾಗಿ, ಓಲೈಕೆ ರಾಜಕಾರಣ, ಓಲೈಕೆ ಪತ್ರಿಕೋದ್ಯಮ ಹಾಗೂ ಓಲೈಕೆಯ ಸಂಸ್ಥೆಗಳನ್ನು ದೂರವಿಡಿ, ಅವರ ಕಾರ್ಯಕ್ಕೆ ಛೀಮಾರಿ ಹಾಕಿ ಹಾಗೂ ಉತ್ತಮವಾಗಿ ಕೆಲಸ ಮಾಡುವ ವ್ಯಕ್ತಿಗಳನ್ನು ಗುರುತಿಸಿ, ಕ್ರಿಯಾಶೀಲರಾಗಿ, ಪ್ರಾಮಾಣಿಕವಾಗಿ, ಆತ್ಮಾಭಿಮಾನಕ್ಕೆ ಧಕ್ಕೆಯಾಗದಂತೆ ಕೆಲಸ ಮಾಡುವ ಪತ್ರಕರ್ತರನ್ನು ಉತ್ತೇಜಿಸಿದಾಗ ಕಳಂಕ ರಹಿತವಾಗಿ ಪತ್ರಿಕೋದ್ಯಮಕ್ಕೆ ಸೇವೆ ಸಲ್ಲಿಸಲು ಸಾಧ್ಯವೆಂದು ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಅಭಿಪ್ರಾಯಪಟ್ಟರು.
ಮೂರು ದಿನಗಳಲ್ಲಿ 49 ಮನೆಗಳ ಗೋಡೆ ಕುಸಿತ
ಕಳೆದ ಒಂದು ವಾರದಿಂದ ಅರಕಲಗೂಡು ತಾಲೂಕಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಶಿಥಿಲಾವಸ್ಥೆ ತಲುಪಿದ್ದ ಮನೆಯ ಗೋಡೆಗಳು ಕುಸಿದು ಬಿದ್ದಿವೆ.ವಾಸದ ಮನೆಗಳ ಗೋಡೆ, ಮೇಲ್ಛಾವಣಿ ಕುಸಿತಗೊಂಡಿದ್ದು ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಮನೆಗಳಲ್ಲಿದ್ದ ದವಸ ಧಾನ್ಯಗಳು, ಬಟ್ಟೆ, ಇತರೆ ಪರಿಕರಗಳಿಗೆ ಹಾನಿ ಉಂಟಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ಜೂನ್ ತಿಂಗಳಿನಿಂದ ಈ ವರೆಗೆ ಮಳೆಯಿಂದ ಒಟ್ಟು 71 ಮನೆಗಳಿಗೆ ಹಾನಿಯಾಗಿದೆ.
ಶಂಕಿತ ಡೆಂಘೀಗೆ ಬಾಲಕ ಬಲಿ
ತಾಲೂಕಿನ ಹಳ್ಳಿಮೈಸೂರು ಹೋಬಳಿಯ ದೊಡ್ಡಹಳ್ಳಿಯ ಸೋಮಶೇಖರ್ ನಂದಿನಿ ದಂಪತಿಯ ಪುತ್ರ ಚಿರಂತ್‌ ಗೌಡ(೬) ಶಂಕಿತ ಡೆಂಘೀನಿಂದ ಮೃತಪಟ್ಟಿದ್ದಾನೆ. ಭೇರ್‍ಯ ಗ್ರಾಮದಲ್ಲಿ ಜ್ವರಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಚಿರಂತ್ ಗೌಡನಿಗೆ ನಂತರ ಕೆ.ಆರ್.ನಗರದ ಆಸ್ಪತ್ರೆಯಲ್ಲಿ ದಾಖಲಾಗಿ, ಜ್ವರ ಉಲ್ಪಣಿಸಿದ ಕಾರಣ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಮುಂಜಾನೆ ಮೃತಪಟ್ಟಿದ್ದಾರೆ.
ಸಂತ್ರಸ್ತ ವ್ಯಾಪಾರಸ್ಥರಿಗೆ ಸಿಗದ ವಾಣಿಜ್ಯ ಮಳಿಗೆಗಳು
೧೯೯೬ ಸೆಪ್ಟಂಬರ್ ತಿಂಗಳಿನಲ್ಲಿ ಗೌರಿಹಬ್ಬಕ್ಕೆ ಮಗಳಿಗೆ ಅರಿಶಿಣ ಕುಂಕುಮ ನೀಡಲು ಬಂದಿದ್ದ ಕೊಡಗಿನ ವ್ಯಕ್ತಿಯೊಬ್ಬರು ಪಟ್ಟಣದ ಹಳೇಬಸ್ ನಿಲ್ದಾಣದಲ್ಲಿನ ಶೌಚಗೃಹದ ಬಾಗಿಲಿನಲ್ಲಿ ಬ್ರೇಕ್ ವಿಫಲಗೊಂಡ ಬಸ್ಸಿನ ಚಕ್ರಕ್ಕೆ ಸಿಲುಕಿ ಸ್ಥಳದಲ್ಲಿ ಮೃತಪಟ್ಟಿದ್ದರು. ಗೌರಿ ಹಬ್ಬದ ಸಂತೆಯ ದಿನವಾದ ಗುರುವಾರ ಘಟನೆ ಖಂಡಿಸಿ ಹಾಗೂ ಹೊಸ ಬಸ್ ನಿಲ್ದಾಣಕ್ಕಾಗಿ ಆಗ್ರಹಿಸಿ ನಡೆಸಿದ ಗಲಭೆಯಿಂದ ಹತ್ತಕ್ಕೂ ಅಧಿಕ ಸರ್ಕಾರಿ ಬಸ್‌ಗಳು ಬೆಂಕಿಗಾಹುತಿಯಾದರೆ, ಬಸ್ ನಿಲ್ದಾಣದಲ್ಲಿದ್ದ ಹೋಟೆಲ್ ಸೇರಿದಂತೆ ೨೫ ಗೂಡಂಗಡಿ ಹಾಗೂ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿದ್ದ ಪಟ್ಟಣ ಪೊಲೀಸ್‌ ಠಾಣೆ ಧ್ವಂಸಗೊಂಡಿದ್ದವು.
ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಸಚಿವ ರಾಜಣ್ಣ ಗರಂ
ತಾಲೂಕು ಹಾಗೂ ಪಟ್ಟಣದ ವ್ಯಾಪ್ತಿಯಲ್ಲಿ ಮಳೆ ಹಾನಿಯಿಂದ ಮನೆ ಮತ್ತು ಹಸುಗಳಿಗೆ ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದ ಸಂದರ್ಭದಲ್ಲಿ ರಸ್ತೆ ಹಾಗೂ ಚರಂಡಿಯ ದುಸ್ಥಿತಿ ಕಂಡು ಮಾತನಾಡಿದರು. ಪುರಸಭೆ ವ್ಯಾಪ್ತಿಯಲ್ಲಿ ಬಡವರು ವಾಸಿಸುವ ಪ್ರದೇಶದಲ್ಲಿ ಯಾವುದೇ ರಸ್ತೆ, ಚರಂಡಿ ಸರಿ ಇಲ್ಲವೆಂದು ದೂರು ಬರಬಾರದು, ಅನಾನುಕೂಲಗಳು ಇದ್ದಲ್ಲಿ ಸಮಸ್ಯೆಯನ್ನು ನೀವು ಬಗೆಹರಿಸಬೇಕು ಎಂದು ಸಚಿವ ರಾಜಣ್ಣ ಸಲಹೆ ನೀಡಿದರು.
ಕಾಡಾನೆಗಳಿಂದ ಅಡಿಕೆ ಮರಗಳ ನಾಶ
ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣ ಹೋಬಳಿಯ ಪಾರಸನಹಳ್ಳಿ ಗ್ರಾಮದಲ್ಲಿ ಕಾಡಾನೆಗಳು ದಾಳಿ ನಡೆಸಿ ಅಡಿಕೆ ಮರಗಳನ್ನು ನಾಶಪಡಿಸಿವೆ.ಕೊಡಗಿನ ಕಟ್ಟೇಪುರ ಅರಣ್ಯ ಪ್ರದೇಶದ ಕಡೆಯಿಂದ ಶುಕ್ರವಾರ ರಾತ್ರಿ ಪಾರಸನಹಳ್ಳಿಯತ್ತ ಲಗ್ಗೆ ಇಟ್ಟಿರುವ ಮೂರು ಕಾಡಾನೆಗಳು ಶಾರದಮ್ಮ ಎಂಬುವರಿಗೆ ಸೇರಿದ 50 ಅಡಿಕೆ ಮರಗಳನ್ನು ಮನಬಂದಂತೆ ಮುರಿದು ನೆಲಕ್ಕುರುಳಿಸಿವೆ. ಕಾಡಾನೆಗಳ ದಾಳಿಯಿಂದ ಇತ್ತ ಪರಿಹಾರವೂ ದೊರೆಯುತ್ತಿಲ್ಲ, ಕಾಡನೆಗಳ ಹಾವಳಿಯನ್ನು ನಿಯಂತ್ರಿಸುತ್ತಿಲ್ಲ ಎಂದು ರೈತ ಮನು ಅಳಲು ತೋಡಿಕೊಂಡಿದ್ದಾರೆ.
  • < previous
  • 1
  • ...
  • 382
  • 383
  • 384
  • 385
  • 386
  • 387
  • 388
  • 389
  • 390
  • ...
  • 552
  • next >
Top Stories
ಟಾಕ್ಸಿಕ್‌ನಂಥಾ ಸಿನಿಮಾ ಭಾರತದಲ್ಲೇ ಬಂದಿಲ್ಲ: ರುಕ್ಮಿಣಿ ವಸಂತ್‌
ನಿಮ್ಮ ಮಿನುಗುವ ಮುಖದ ಗುಟ್ಟು ಏನು? : ಮೋದಿಗೆ ಹರ್ಲಿನ್‌ ಪ್ರಶ್ನೆ
ವಿಶ್ವವ್ಯಾಪಿ ಹರಡಿದ ಬಾಯಿ ಕ್ಯಾನ್ಸರ್ : ಭೀಕರ ಖಾಯಿಲೆ ಕಾರಣ, ಲಕ್ಷಣ, ಚಿಕಿತ್ಸೆ ಹೇಗೆ?
ನವೆಂಬರ್‌ಗಲ್ಲ, 2028ಕ್ಕೆ ಕ್ರಾಂತಿ: ಡಿಸಿಎಂ ಡಿಕೆಶಿ
ಗಿಲ್ಲಿ ನಟನ ಕುರಿತು 6 ಇಂಟರೆಸ್ಟಿಂಗ್‌ ಸಂಗತಿಗಳು
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved