ಸಕಲೇಶಪುರದಲ್ಲಿ ಕೃಷಿ ಚುರುಕು: ತೋಟದ ಕಾರ್ಮಿಕರೇ ಬೆಳೆಗಾರರ ನಿಯಂತ್ರಣ! ಸಕಲೇಶಪುರದಲ್ಲಿ ಉತ್ತಮ ಮಳೆ ಸುರಿಯುತ್ತಿರುವುದರಿಂದ ಕಾಫಿತೋಟಗಳಿಗೆ ರಸಗೊಬ್ಬರ, ಗೊಟ್ಟಿಗೆ ಗೊಬ್ಬರ ನೀಡುವ ಕೆಲಸಕ್ಕೂ ಬೆಳೆಗಾರರು ಮುಂದಾಗಿದ್ದಾರೆ. ಅಲ್ಲದೆ ಭತ್ತ ನಾಟಿ ಪೂರ್ವ ಸಿದ್ದತೆಗಳಿಗೂ ಸದ್ಯ ಚಾಲನೆ ನೀಡಲಾಗಿದೆ. ಇದರಿಂದ ಕಾರ್ಮಿಕರಿಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಸದ್ಯ ಕಾಫಿ ಹಣ್ಣು ಕೊಯ್ಲಿನ ನಂತರ ಉತ್ತರ ಭಾರತ ಹಾಗೂ ಉತ್ತರ ಕರ್ನಾಟಕದಿಂದ ಬಂದಿದ್ದ ಕಾರ್ಮಿಕರು ಗ್ರಾಮಕ್ಕೆ ಮರಳಿದ್ದು ಇವರ ಅನುಪಸ್ಥಿತಿಯಲ್ಲಿ ಸ್ಥಳೀಯ ಕಾರ್ಮಿಕರು ಈ ಎಲ್ಲ ಕೆಲಸಗಳನ್ನು ನಿರ್ವಹಿಸಬೇಕಿದೆ.