ಸೇವೆ ನಿರಂತರವಾಗಿರಲಿ: ಚೇತನ್ ಗುರೂಜಿ ಸಲಹೆಸೇವಾ ಮನೋಭಾವ ನಿರಂತರವಾಗಿ ನಡೆಯಬೇಕು ಎಂದು ಯೋಗ ಗುರು ಚೇತನ್ ಗುರೂಜಿ ಹೇಳಿದರು. ಆಲೂರು ಪಟ್ಟಣದಲ್ಲಿ ಲಯನ್ಸ್ ಕ್ಲಬ್ ಸೇವಾ ಸಂಸ್ಥೆ, ಆಲೂರಿನ ಮಾತೃಶ್ರೀ ಕ್ಲಿನಿಕ್, ಹಾಸನದ ಸಿಎನ್ಐ ರೆಡ್ಫರ್ನ್ ಮೆಮೊರಿಯಲ್ ಆಸ್ಪತ್ರೆ, ಮಹಾಲಕ್ಷ್ಮಿ ಮಂಜಪ್ಪ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.