ಭಾಗ್ಯಗಳ ಬದಲಿಗೆ ರೈತರಿಗೆ ನೆರವಾಗಿ: ರೈತ ಸಂಘದ ಚಂದ್ರಶೇಖರ್ ಬೋವಿಸರ್ಕಾರ ಕೇವಲ ಬಿಟ್ಟಿ ಭಾಗ್ಯಗಳನ್ನು ಘೋಷಣೆ ಮಾಡಿದರೆ ಸಾಲದು ದೇಶದ ಬೆನ್ನಲುಬಾದ ರೈತನ ಸಂಕಷ್ಟಕ್ಕೆ ಸ್ಪಂದಿಸಿ ಬೆಳೆ ಪರಿಹಾರ, ಸಹಾಯ ಧನ, ಕೃಷಿ ಚಟುವಟಿಕೆಗಳಿಗೆ ನೀರಾವರಿ ಒದಗಿಸುವಲ್ಲಿ ಮುಂದಾಗಬೇಕು ಎಂದು ರೈತ ಸಂಘದ ರೈತ ಬಣ ಯುವ ಘಟಕ ರಾಜ್ಯಾಧ್ಯಕ್ಷ ಚಂದ್ರಶೇಖರ್ ಬೋವಿ ಹೇಳಿದರು. ಅರಸೀಕೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.