ಧರ್ಮಸ್ಥಳ ವಿರೋಧಿ ಅಪಪ್ರಚಾರಕ್ಕೆ ಜೆಡಿಎಸ್ ತಿರುಗೇಟುಧರ್ಮಸ್ಥಳವು ಶತಮಾನಗಳಿಂದ ಹಿಂದೂ ಸಮುದಾಯದ ಶ್ರದ್ಧಾ ಕೇಂದ್ರವಾಗಿದ್ದು, ಇಲ್ಲಿಂದ ಅಣ್ಣದಾಸೋಹ, ಶಿಕ್ಷಣ, ವೈದ್ಯಕೀಯ, ಗ್ರಾಮೀಣಾಭಿವೃದ್ಧಿ, ಸಹಸ್ರಾರು ದೇವಾಲಯಗಳ ಪುನರ್‌ಸ್ಥಾಪನೆ ಸೇರಿದಂತೆ ಅನೇಕ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳು ನಡೆಯುತ್ತಿವೆ. ಇಂತಹ ಕ್ಷೇತ್ರಕ್ಕೆ ಅಪಪ್ರಚಾರ ಮಾಡುವ ಪ್ರಯತ್ನ ದುರಾಸೆಯಾಗಿದೆ ಎಂದು ಲಿಂಗೇಶ್ ಖಂಡಿಸಿದರು. ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಕಾರ್ಯಕ್ಕೆ ಬೆಂಬಲ ಸೂಚಿಸುವ ಉದ್ದೇಶದಿಂದಲೂ ಈ ಯಾತ್ರೆ ಹಮ್ಮಿಕೊಂಡಿದ್ದೇವೆ ಎಂದರು.