ನಿಯಮ ಮೀರಿ ಸಾಲ ವಸೂಲಿ ಮಾಡದಂತೆ ಮೈಕ್ರೋ ಫೈನಾನ್ಸ್‌ಗಳಿಗೆ ಸಚಿವ ಶಿವಾನಂದ ಪಾಟೀಲ ಎಚ್ಚರಿಕೆಮೈಕ್ರೋಫೈನಾನ್ಸ್ಗಳು ಬಡ್ಡಿ ವಿಧಿಸುವ ಬಗ್ಗೆ ಆರ್‌ಬಿಐನ ಸ್ಪಷ್ಟ ಆದೇಶ ಇಲ್ಲದಿದ್ದರೂ ಶೇ. 25ರಷ್ಟು ಬಡ್ಡಿ ವಿಧಿಸಲು ಅಧಿಕಾರ ಕೊಟ್ಟವರ್ಯಾ ರು? ನಿಮ್ಮ ತಪ್ಪಿನಿಂದಾಗಿ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಜನಸಾಮಾನ್ಯರು ಜಿಲ್ಲಾಡಳಿತ ಸತ್ತು ಹೋಗಿದೆ ಎಂದೆಲ್ಲಾ ಮಾತನಾಡುತ್ತಾರೆ. ಆದ್ದರಿಂದ ನಿಯಮ ಮೀರಿ ಸಾಲ ವಸೂಲಿ ಮಾಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಾಕೀತು ಮಾಡಿದರು.