ಪ್ರತಿ ಹೆಕ್ಟೇರ್‌ಗೆ ₹10 ಸಾವಿರ ಅತಿವೃಷ್ಟಿ ಪರಿಹಾರ ನೀಡಿ: ವಿರೂಪಾಕ್ಷಪ್ಪ ಬಳ್ಳಾರಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ವಾಡಿಕೆಗಿಂತ ಶೇ. 75ರಷ್ಟು ಹೆಚ್ಚು ಪ್ರಮಾಣದಲ್ಲಿ ಮಳೆಯಾಗಿದೆ. ಬಿತ್ತನೆ ಮಾಡಿದ ಬೀಜ ಮೊಳಕೆಯೊಡೆದು ಸಸಿಗಳು ಸಾಯುತ್ತಿವೆ. ಆದರೆ ರೈತರು ಮೊದಲು ಬಿತ್ತನೆಗೆ ವ್ಯಯಿಸಿದ್ದ ಹಣ ವ್ಯರ್ಥವಾಗಿದ್ದು, ಮರು ಬಿತ್ತನೆಗೆ ಮುಂದಾಗಿರುವ ರೈತರ ನೆರವಿಗೆ ಸರ್ಕಾರ ಬರಬೇಕಾಗಿದೆ.