ತಿರುಗದ ಕಬ್ಬಿನ ಗಾಣ, ಬೆಲ್ಲ ತಯಾರಿಕೆಗೆ ಕಹಿಕಬ್ಬಿನ ಗಾಣಗಳು ತಿರುಗುತ್ತಿಲ್ಲ, ಬೆಲ್ಲ ತಯಾರಿಕೆಗೆ ಕಹಿ ಅನುಭವವಾಗಿದೆ. ಸಕ್ಕರೆ ಕಾರ್ಖಾನೆ ಭರದಿಂದ ಕಬ್ಬು ನುರಿಸುತ್ತಿವೆ. ಆದರೆ ಗಾಣ ನೆಚ್ಚಿದವರು ಹಣೆಗೆ ಕೈ ಹಚ್ಚಿ ಚಿಂತೆಗೊಳಗಾಗಿದ್ದಾರೆ, ಹಾನಗಲ್ಲ ತಾಲೂಕು ಭತ್ತ, ಕಬ್ಬು ಬೆಳೆದು ಹಸಿವು ನೀಗಿಸಿ, ಸಿಹಿ ಉಣಿಸಿದ ನಾಡು. ೯೦೦ ಕೆರೆಗಳು, ಧರ್ಮಾ ವರದಾ ನದಿ ಇರುವ ಈ ತಾಲೂಕಿನಲ್ಲಿ ಬೆಲ್ಲಕ್ಕಾಗಿಯೇ ಎಕರೆ, ಅರ್ಧ ಎಕರೆ ಕಬ್ಬು ಹಾಕಿಕೊಂಡು ಗಾಣಗಳಿಗೆ ಹೋಗಿ ಬೆಲ್ಲ ಮಾಡಿಸಿಕೊಂಡು, ಇಡೀ ವರ್ಷ ಬಳಸುತ್ತಿದ್ದರು.