ಎಪಿಎಂಸಿ ಗೋದಾಮು ಬಾಡಿಗೆ ನಿಯಮ ಉಲ್ಲಂಘನೆ: ಆರೋಪಚಿಕ್ಕಬಾಸೂರು ಗ್ರಾಮದಲ್ಲಿ ಕೋಟಿಗಟ್ಟಲೇ ಅನುದಾನದಲ್ಲಿ ಸಾವಿರ ಮೆಟ್ರಿಕ್ ಟನ್ ಸಂಗ್ರಹದ ಗೋದಾಮು 2017ರಲ್ಲಿ ನಿರ್ಮಿಸಿದೆ. ಈವರೆಗೂ ಕಟ್ಟಡವನ್ನು ಹಾಳು ಬಿಟ್ಟಿದ್ದಲ್ಲದೇ, ಕಳೆದೊಂದು ವರ್ಷದಿಂದ ಖಾಸಗಿ ವ್ಯಾಪಾರಸ್ಥರು ಮತ್ತು ಕೆಲ ವ್ಯಕ್ತಿಗಳಿಗೆ ನಿಯಮಾನುಸಾರ ಯಾವುದೇ ಟೆಂಡರ್ ಕರೆಯದೇ ಬಾಡಿಗೆ ನಿರ್ಧರಿಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.