ಇಂದಿನಿಂದ ಮಂತ್ರವಾಡಿಯಲ್ಲಿ ರೇವಣಸಿದ್ಧೇಶ್ವರ ಜಾತ್ರಾ ಮಹೋತ್ಸವಹಾವೇರಿ ಜಿಲ್ಲೆಯ ಸವಣೂರ ತಾಲೂಕು ಐತಿಹಾಸಿಕ ನೆಲೆವೀಡುಗಳ ತಾಣವಾಗಿದೆ. ಇಲ್ಲಿಯ ಸತ್ಯಬೋಧ ಸ್ವಾಮಿಗಳವರ ಮೂಲ ವೃಂದಾವನ ಮಠ, ಚವಡಾಳದ ಪವಾಡ ಪುರುಷ ಹಾವಯ್ಯನವರ ದೇಹವಿಟ್ಟ ಸುಕ್ಷೇತ್ರ, ಮಾದಾಪುರ ಶಂಭುಲಿಂಗ ಶಿವಾಚಾರ್ಯ ಚರಮೂರ್ತಿಗಳ ಜನ್ಮಸ್ಥಳ, ಕಾರಡಗಿ ವೀರಭದ್ರೇಶ್ವರ ಸುಕ್ಷೇತ್ರ ಇವೆಲ್ಲವುಗಳೊಂದಿಗೆ ಸುಕ್ಷೇತ್ರವಾದ ಮಂತ್ರವಾಡಿ ಗ್ರಾಮದ ಬೆಟ್ಟದಲ್ಲಿ ನೆಲೆಸಿರುವ ಜಗದ್ಗುರು ರೇವಣಸಿದ್ಧೇಶ್ವರ ದೇವಸ್ಥಾನ ಪ್ರಖ್ಯಾತಿಯಾಗಿದೆ.