ಸೇನಾನಿಗಳ ನಿಂದನೆಗೆ ವ್ಯಾಪಕ ಆಕ್ರೋಶ: ಕೊಡಗು ಬಂದ್ ಎಚ್ಚರಿಕೆವೀರ ಸೇನಾನಿಗಳಾದ ಫೀ.ಮಾ. ಕೊಡಂದೇರ ಕಾರ್ಯಪ್ಪ ಮತ್ತು ಜನರಲ್ ಕೊಡಂದೇರ ತಿಮ್ಮಯ್ಯ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ನಿಂದಿಸಿರುವ ದೇಶದ್ರೋಹಿಯನ್ನು ತಕ್ಷಣ ಬಂಧಿಸಿ ಗರಿಷ್ಠ ಪ್ರಮಾಣದ ಶಿಕ್ಷೆಗೆ ಒಳಪಡಿಸಬೇಕು. ಇಲ್ಲದಿದ್ದರೆ ಕೊಡಗು ಬಂದ್‌ಗೆ ಕರೆ ನೀಡುವುದಾಗಿ, ಕೊಡವಾಮೆರ ಕೊಂಡಾಟ ಸಂಘಟನೆ ಎಚ್ಚರಿಸಿದೆ.