ರಸ್ತೆ ಕುಸಿತ ಭೀತಿ: ತಾತ್ಕಾಲಿಕ ಮುಂಜಾಗ್ರತಾ ಕ್ರಮಸುಂಟಿಕೊಪ್ಪ ಪಂಪ್‌ಹೌಸ್ ಬಡಾವಣೆಯ ಸಂಪರ್ಕ ಕಲ್ಪಿಸುವ ರಸ್ತೆ ಕುಸಿಯುವ ಭೀತಿಯ ಬಗ್ಗೆ ಮಂಗಳವಾರ ನಿವಾಸಿಗಳು ಪ್ರತಿಭಟನೆ ಮತ್ತು ಆಕ್ರೋಶ ವ್ಯಕ್ತಪಡಿಸಿದ ವರದಿ ಪ್ರಕಟಗೊಂಡ ಬೆನ್ನಲ್ಲೇ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಬುಧವಾರ ಗ್ರಾಮ ಪಂಚಾಯಿತಿ ಪಿಡಿಒ ಲೋಕೇಶ್, ಪಿ.ಎ. ಶ್ರೀಧರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಜಾಗದ ಮಾಲೀಕರಿಗೆ ಎಚ್ಚರಿಕೆ ನೀಡಿ ತಾವೇ ಪರಿಹಾರ ಒದಗಿಸುವಂತೆ ಸೂಚಿದರು.