ಹರ್ ಘರ್ ತಿರಂಗ ಅಭಿಯಾನ: ಬಿಜೆಪಿ ಯುವಮೋರ್ಚಾ ಬೈಕ್ ಜಾಥಾಸ್ವಾತಂತ್ರ್ಯೋತ್ಸವ ಪ್ರಯುಕ್ತ ಹರ್ ಘರ್ ತಿರಂಗ ಅಭಿಯಾನ ಅಂಗವಾಗಿ ಬಿಜೆಪಿ ಯುವಮೋರ್ಚಾ ಮಡಿಕೇರಿ ಮಂಡಲ ಹಾಗೂ ಗ್ರಾಮಾಂತರ ವತಿಯಿಂದ ಮಂಡಲದ ವತಿಯಿಂದ ನಗರದಲ್ಲಿ ಬೈಕ್ ಜಾಥಾ ನಡೆಸಲಾಯಿತು. ಬನ್ನಿ ಮಂಟಪದಿಂದ ಆರಂಭವಾದ ಜಾಥಾ ನಗರದ ಜನರಲ್ ತಿಮ್ಮಯ್ಯ ವೃತ್ತ, ಸುದರ್ಶನ ವೃತ್ತದ ಮೂಲಕ ಬಿಜೆಪಿ ಕಚೇರಿಯವರೆಗೆ ಸಾಗಿತು.