ಮಡಿಕೇರಿ ಗಾಂಧಿ ಸ್ಮಾರಕ ಉದ್ಯಾನವನ ಕಾಮಗಾರಿ ಪ್ರಗತಿ: ಸಚಿನ್ಗಾಂಧಿ ಸ್ಮಾರಕ ಉದ್ಯಾನವನ ಅಭಿವೃದ್ಧಿ ಸಮಿತಿ ಸಭೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು. ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಸಚಿನ್ ಮಾಹಿತಿ ನೀಡಿ,ಗಾಂಧಿ ಸ್ಮಾರಕ ಉದ್ಯಾನವನ ಪೂರ್ಣ ಕಾಮಗಾರಿ ಗ್ರಂಥಾಲಯ, ಉದ್ಯಾನವನ, ಬೆಳಕು ವ್ಯವಸ್ಥೆ, ಮತ್ತಿತರ ಕಾಮಗಾರಿಗೆ ಸುಮಾರು 1.98 ಕೋಟಿ ರು. ಅಂದಾಜು ಮಾಡಲಾಗಿದೆ ಎಂದು ತಿಳಿಸಿದರು.