ಮೂರ್ನಾಡು ವಿದ್ಯಾಸಂಸ್ಥೆಗೆ ಹಾಕಿ ಕ್ರೀಡಾ ಸಾಮಗ್ರಿಗಳ ಕೊಡುಗೆಖೇಲೋ ಇಂಡಿಯಾದ ಪರ್ಫಾರ್ಮೆನ್ಸ್ ನಿರ್ದೇಶಕರಾಗಿರುವ ಡಾ. ಅಂಜಪರವಂಡ ಸುಬ್ಬಯ್ಯ ಅವರು ಮೂರ್ನಾಡು ವಿದ್ಯಾಸಂಸ್ಥೆಗೆ 30 ಹಾಕಿ ಸ್ಟಿಕ್, 30 ಹಾಕಿ ಬಾಲ್ ಹಾಗೂ ಗೋಲ್ ಕೀಪರ್ ಕಿಟ್ ಸೇರಿ ಒಟ್ಟು 50,000 ರು. ಮೌಲ್ಯದ ಹಾಕಿ ಕ್ರೀಡಾ ಸಾಮಗ್ರಿಗಳನ್ನು ಕೊಡುಗೆಯನ್ನಾಗಿ ನೀಡಿದರು.