ಗೋವಾದಲ್ಲಿ ಕೊಲೆಯಾದ 18 ವರ್ಷ ಬಳಿಕ ಕೊಡಗಿನ ಬಾಲಕಿ ಅಂತ್ಯ ಸಂಸ್ಕಾರ!ಡಿ. 2006ರಲ್ಲಿ ಅಯ್ಯಂಗೇರಿಯ 13ರ ಹರೆಯದ ಬಾಲಕಿ ಸಫಿಯಾಳ ಕೊಲೆ ಗೋವಾದಲ್ಲಿ ನಡೆದಿತ್ತು. ಜೂನ್ 5, 2008 ರಂದು ಆಕೆಯ ತಲೆಬುರುಡೆ ಮತ್ತು ಕೆಲವು ಮೂಳೆಯ ತುಣುಕುಗಳು ಪತ್ತೆಯಾಗಿದ್ದವು. ಅದನ್ನು ಕಾಸರಗೋಡು ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಇರಿಸಲಾಗಿತ್ತು. ಸೋಮವಾರ ನ್ಯಾಯಾಲಯದ ನಿರ್ದೇಶನದ ಮೇರೆಗೆ ಸಫಿಯಾಳ ಅಸ್ಥಿ ಪಂಜರವನ್ನು ಆಕೆಯ ಪೋಷಕರಿಗೆ ಹಸ್ತಾಂತರಿಸಲಾಯಿತು.