ಪುಂಜಿಲಗೇರಿ, ಇಂಜಿಲ ಗ್ರಾಮ: ಕಾಡಾನೆ ಹಿಂಡು ಅಟ್ಟುವ ಕಾರ್ಯಾಚರಣೆ ಶುರುಅಮ್ಮತ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪುಲಿಯೇರಿ ಇಂಜಿಲ ಗ್ರಾಮದ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಬುಧವಾರ ಅರಣ್ಯ ಇಲಾಖೆ ಕಾಡಿಗಟ್ಟುವ ಕಾರ್ಯಾಚರಣೆ ಕೈಗೊಂಡಿತು. ಇಲಾಖಾ ಸಿಬ್ಬಂದಿ ಪುಲಿಯೇರಿ , ಇಂಜಿಲಗೆರೆ ಭಾಗದ ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ಬೆಳೆಗಾರರಿಗೆ ಉಪಟಳ ನೀಡುತ್ತಾ ಬೆಳೆಗಳನ್ನು ನಾಶ ಪಡಿಸುತ್ತಿದ್ದ ಕಾಡಾನೆಗಳನ್ನು ಹಿಂಡನ್ನು ಪತ್ತೆ ಹಚ್ಚಿ ಕಾಫಿ ತೋಟದಿಂದ ಅರಣ್ಯಕ್ಕೆ ಅಟ್ಟಿದರು.