ಕೊಡಗಿನ ಮುಂಗಾರಿನ ಸೊಬಗು ಚೇಲಾವರ ಜಲಪಾತಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿಯಿಂದ ನಾಪೋಕ್ಲು, ಕಕ್ಕಬ್ಬೆ ಮರ್ಗವಾಗಿ ಸುಮಾರು ೩೫ ಕಿ.ಮೀ. ಕ್ರಮಿಸಿದರೆ ಚೆಯ್ಯಂಡಾಣೆ ಗ್ರಾಮ ಸಿಗುತ್ತದೆ. ಅಲ್ಲಿಂದ ೩ ಕಿ.ಮೀ. ದೂರದಲ್ಲಿ ಚೇಲವಾರ ಗ್ರಾಮದಲ್ಲಿ ಆಮೆಪಾರೆ ಎಂಬಲ್ಲಿ ಚೇಲಾವರ ಜಲಪಾತ ಸಿಗುತ್ತದೆ. ಬೆಟ್ಟಗುಡ್ಡಗಳ ನಡುವೆ ಕಬ್ಬೆಬೆಟ್ಟದ ಸಂಧಿಯಿಂದ ಸುಮಾರು ೯೦ ಅಡಿಗಳಷ್ಟು ಎತ್ತರದಿಂದ ಸುಂದರ ಪರಿಸರದ ರುದ್ರ ರಮಣೀಯ ಹಾಲ್ನೋರೆಯಂತೆ ದುಮುಕುವ ಜಲಧಾರೆಯೇ ಚೇಲವಾರ ಜಲಪಾತ.