• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • kodagu

kodagu

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಅಂತಾರಾಷ್ಟ್ರೀಯ ಜನಾಂಗೀಯ ತಾರತಮ್ಯ ನಿರ್ಮೂಲನಾ ದಿನಾಚರಣೆ
ಅಂತಾರಾಷ್ಟ್ರೀಯ ಜನಾಂಗೀಯ ತಾರತಮ್ಯ ನಿರ್ಮೂಲನಾ ದಿನಾಚರಣೆ ಅಂಗವಾಗಿ ಮೂರ್ನಾಡು ರಸ್ತೆಯಲ್ಲಿರುವ ಕಾಫಿ ಕ್ಯಾಸ್ಟಲ್ ಕೂರ್ಗ್ ನಲ್ಲಿ ಕೊಡವ ನ್ಯಾಷನಲ್ ಸಂಘಟನೆ ಕೊಡವ ಲ್ಯಾಂಡ್‌ಗಾಗಿ ಹಕ್ಕೊತ್ತಾಯ ಮಂಡಿಸಿತು. ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ಲೋಕಸಭಾ ಚುನಾವಣೆಯಲ್ಲಿ ಕೊಡವ ವಿರೋಧಿಗಳಿಗೆ ಮತ ಹಾಕದಂತೆ ಕರೆ ನೀಡಿದರು.
ಜೇಸಿಐ ವ್ಯಕ್ತಿತ್ವ ವಿಕಸನದ ಬೃಹತ್ ಕ್ರಿಯಾಶೀಲ ಸಂಸ್ಥೆ: ರಮೇಶ್‌ ದಾಡಿಗಲ್‌
ಸೋಮವಾರಪೇಟೆ ಪಟ್ಟಣದ ಮಹಿಳಾ ಸಮಾಜದಲ್ಲಿ ಸ್ಥಳೀಯ ಜೆಸಿಐ ಸಂಸ್ಥೆಗಳ ಸದಸ್ಯರ ಸಭೆ ನಡೆಯಿತು. ಜೇಸಿಐ ಸೋಮವಾರಪೇಟೆ ಪುಷ್ಪಗಿರಿ ಘಟಕಕ್ಕೆ ನೂತನವಾಗಿ ಸೇರ್ಪಡೆಗೊಂಡ ಸದಸ್ಯರಿಗೆ ರಾಷ್ಟ್ರೀಯ ಉಪಾಧ್ಯಕ್ಷರು ಪ್ರಮಾಣ ವಚನ ಬೋಧಿಸಿದರು.
25 ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ: ಜಿಲ್ಲಾಧಿಕಾರಿ ಸಿದ್ಧತಾ ಸಭೆ
ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾ.25 ರಿಂದ ಏ.6 ರವರೆಗೆ ನಡೆಯಲಿದ್ದು, ಕೊಡಗು ಜಿಲ್ಲೆಯ 27 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಮಡಿಕೇರಿ ತಾಲೂಕಿನ 8, ಸೋಮವಾರಪೇಟೆ ತಾಲೂಕಿನ 11, ವಿರಾಜಪೇಟೆ ತಾಲೂಕಿನ 8 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಗುರುವಾರ ಸಿದ್ಧತಾ ಸಭೆ ನಡೆಸಿದರು.
ಮಳೆ, ಬೆಳೆ ದೇವರು ಶ್ರೀ ಪಾಡಿ ಇಗ್ಗುತ್ತಪ್ಪ ಕುಂಬ್ಯಾರ್‌ ಕಲಾಡ್ಚ ವಾರ್ಷಿಕೋತ್ಸವ ನಾಳೆ
ಸಕಾಲದಲ್ಲಿ ಮಳೆ ಆಗದಿದ್ದಾಗ ಶ್ರೀ ಪಾಡಿ ಇಗ್ಗುತ್ತಪ್ಪ ಭಕ್ತರು ಮಳೆಗಾಗಿ ಇಗ್ಗುತ್ತಪ್ಪನನ್ನು ಪ್ರಾರ್ಥಿಸುತ್ತಾರೆ. ಕಲ್ಲಾಡ್ಚ ಹಬ್ಬದ ಸಂದರ್ಭದಲ್ಲಿ ಸಾಮಾನ್ಯವಾಗಿ ಮಳೆಯಾಗುತ್ತದೆ. ಕಾಫಿ ಬೆಳೆಗಾರರು ಸಂತೋಷಗೊಳ್ಳುತ್ತಾರೆ. ಈ ಸಲ ಮಾ.೨೩ ಶನಿವಾರ ಹಬ್ಬ ಆಚರಣೆಯಾಗಲಿದೆ.
ಸಿಪಿಐ ಮಾಸ್‌ಲೈನ್‌ ಕಾರ್ಯಕರ್ತರ ತರಬೇತಿ ಶಿಬಿರ
ಸಿಪಿಐ(ಎಂಎಲ್) ಕೊಡಗು ಜಿಲ್ಲಾ ಸಮಿತಿ ವತಿಯಿಂದ ಸೋಮವಾರಪೇಟೆ ಮಾನಸಹಾಲ್‍ನಲ್ಲಿ ನಡೆದ ಸಿಪಿಐ(ಎಂಎಲ್) ಮಾಸ್‍ಲೈನ್ ಕಾರ್ಯಕರ್ತರ ತರಬೇತಿ ಶಿಬಿರ ನಡೆಯಿತು. ಸಭೆಯಲ್ಲಿ ಬಿಜೆಪಿ ಸರ್ಕಾರವನ್ನು ದೇಶದಿಂದ ಕಿತ್ತೊಗೆಯಲು ಕರೆ ನೀಡಲಾಯಿತು.
ಕಾರಿನ ಮೇಲೆ ಕಾಡಾನೆ ದಾಳಿ: ಓಡಿ ಬದುಕಿದ ಪ್ರವಾಸಿಗರು
ಮಡಿಕೇರಿಯಿಂದ ಚೆಟ್ಟಳ್ಳಿ ಮಾರ್ಗವಾಗಿ ಮೂರ್ನಾಡಿನ ವ್ಯಕ್ತಿಯೊಬ್ಬರಿಗೆ ಸೇರಿದ ಟ್ಯಾಕ್ಸಿಯಲ್ಲಿ ದುಬಾರೆ ಸಾಕಾನೆ ಶಿಬಿರಕ್ಕೆ ತೆರಳುತ್ತಿದ್ದ ವೇಳೆ ಪ್ರವಾಸಿಗರ ವಾಹನಕ್ಕೆ ರಸ್ತೆ ಮಧ್ಯೆ ಒಂಟಿ ಸಲಗ ಎದುರಾಗಿದೆ. ಈ ವೇಳೆ ಸಲಗ ಟ್ಯಾಕ್ಸಿ ಮೇಲೆ ಏಕಾಏಕಿ ದಾಳಿ ನಡೆಸಿದೆ. ದಾಳಿಯಿಂದ ಕಾರಿನ ಹಿಂಬದಿಗೆ ಹಾನಿ ಉಂಟಾಗಿದೆ. ಪ್ರಯಾಣಿಕರು ಪಾರಾಗಿದ್ದಾರೆ.
ಬೀದಿನಾಯಿ ಕಡಿತ: ಬಾಲಕಗೆ ಗಂಭೀರ ಗಾಯ
ಬುಧವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಆಲೂರುಸಿದ್ದಾಪುರ ಗ್ರಾಮ ಪಂಚಾಯಿತಿ ಕಚೇರಿ ಬಳಿ ಬಾಲಕ ಮೋಕ್ಷಿತ್ ಆಟವಾಡುತ್ತಿದ್ದಾಗ ಏಕಾಏಕಿ ಬಂದ ಬೀದಿನಾಯಿ ಬಾಲಕನ ಮೇಲೆ ದಾಳಿ ನಡೆಸಿದೆ. ಬಾಲಕ ಕೂಗಿಕೊಂಡು ಓಡಿದರೂ ಬಿಡದ ಬೀದಿನಾಯಿ ಬಾಲಕನ್ನು ಅಟ್ಟಾಡಿಸಿಕೊಂಡು ಬೀಳಿಸಿದೆ. ಬಾಲಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಟ್ಟಗೇರಿ ಭಗವತಿ ದೇವರ ವಾರ್ಷಿಕ ಉತ್ಸವ 24,25ರಂದು
ಬೆಟ್ಟಗೇರಿ ಭಗವತಿ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವ ಪ್ರಯುಕ್ತ 25ರಂದು ಪೂರ್ವಾಹ್ನ 11ಕ್ಕೆ ವಿಷ್ಣುಮೂರ್ತಿಯ ಕೆಂಡಸೇವೆ ಹಾಗೂ ಗುಳಿಗ ರಾಜನ ಕೋಲ, ಮಧ್ಯಾಹ್ನ 12.30ರಿಂದ ಸಾಮೂಹಿಕ ಅನ್ನಸಂತರ್ಪಣೆ ನಡೆಯಲಿದೆ.
ಕೊಡಗು ಅಭಿವೃದ್ಧಿಯ ವೈಯಕ್ತಿಕ ಪ್ರಣಾಳಿಕೆ: ಅಭ್ಯರ್ಥಿಗಳಿಗೆ ಆಗ್ರಹ
ವಿವಿಧ ರಾಜಕೀಯ ಪಕ್ಷದ ಅಭ್ಯರ್ಥಿಗಳು ಕೊಡಗು ಜಿಲ್ಲೆಯ ಹಿತಾಸಕ್ತಿ ಕಾಪಾಡುವ ಹಾಗೂ ಜಿಲ್ಲೆಯ ಅಭಿವೃದ್ಧಿಗಾಗಿ ತಮ್ಮ ವೈಯಕ್ತಿಕ ಪ್ರಣಾಳಿಕೆಯಲ್ಲಿ ಯಾವ ಕಾರ್ಯಯೋಜನೆ ಇಟ್ಟುಕೊಂಡಿದ್ದಾರೆ ಹಾಗೂ ಕೊಡಗಿನ ಬಗ್ಗೆ ಅವರ ದೃಷ್ಟಿಕೋನ ಏನೆಂಬುದನ್ನು ಚುನಾವಣಾ ಪೂರ್ವದಲ್ಲಿಯೇ ಸ್ಪಷ್ಟಪಡಿಸಬೇಕೆಂದು ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ ಪ್ರಮುಖರು ಒತ್ತಾಯಿಸಿದ್ದಾರೆ.
ತಲೆಮರೆಸಿದ್ದ ಅತ್ಯಾಚಾರ ಆರೋಪಿ ಸೆರೆ
ಮಧ್ಯಪ್ರದೇಶದ ಸಜಾಪುರ್ ಮೂಲದ ಮನಿಶ್ ಮಾಲ್ವಿಯ (26) ಬಂಧಿತ ಆರೋಪಿ. ಕಕ್ಕಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೂಮಾಲೆ ಎಸ್ಟೇಟ್ ನಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ದಂಪತಿಯೊಂದಿಗೆ ವಾಸವಾಗಿದ್ದ ಬಾಲಕಿಯೊಬ್ಬಳ ಮೇಲೆ ಈತ ಅತ್ಯಾಚಾರ ಎಸಗಿದ್ದಾಗಿ ಆರೋಪಿಸಲಾಗಿದೆ.
  • < previous
  • 1
  • ...
  • 455
  • 456
  • 457
  • 458
  • 459
  • 460
  • 461
  • 462
  • 463
  • ...
  • 548
  • next >
Top Stories
ಕೇಂದ್ರದ ಅನ್ಯಾಯ ಬಗ್ಗೆ ಜೆಡಿಎಸ್‌, ಬಿಜೆಪಿ ಸಂಸದರಿಂದ ಮೌನ : ಸಿಎಂ
ವೋಟ್‌ ಚೋರಿ ಸುಳ್ಳು ಸಂಕಥನ ಸೃಷ್ಟಿಸಿದ್ದ ಕಾಂಗ್ರೆಸ್‌ಗೆ ಬಿಹಾರದಲ್ಲಿ ತಕ್ಕಪಾಠ : ಎಚ್ಡಿಕೆ
ರಾಜ್ಯದಲ್ಲಿ ನವೆಂಬರ್ ಕ್ರಾಂತಿ ಚರ್ಚೆಗೆ ತಣ್ಣೀರು?
ದೇಸಿ ಜ್ಞಾನ ಪರಿಸುತ್ತಿರುವ ಕನ್ನಡ ವಿವಿ ಪ್ರಸಾರಾಂಗ
ರಾಜ್ಯ ಕಾರ್ಮಿಕರಿಗೆ ಕನಿಷ್ಠ ವೇತನದ ಹಕ್ಕೂ ಇಲ್ಲ!
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved